ಮಾಣಿಕನಗರ: ದತ್ತ ಜಯಂತಿ, ಮಾಣಿಕ ಪ್ರಭುಗಳ 208ನೇ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಹುಮನಾಬಾದ್: ಡಿ.1:ಸಮೀಪದ ಮಾಣಿಕನಗರ ಐತಿಹಾಸಿಕ ಶ್ರೀ ಮಾಣಿಕ ಪ್ರಭುಗಳ 208ನೇ ಜಾತ್ರೆ ಮತ್ತು ದತ್ತ ಜಯಂತಿ ಮಹೋತ್ಸವವು ಮಾಣಿಕಪ್ರಭು ಸಂಸ್ಥಾನದ ಪೀಠಾಧೀಪತಿ ಡಾ.ಜ್ಞಾನರಾಜ ಪ್ರಭು ಅವರ ದಿವ್ಯ ಸಾನಿಧ್ಯದಲ್ಲಿ ಯೋಗ ದಂಡ ಪೂಜೆ ಮತ್ತು ತೀರ್ಥಸ್ನಾನದೊಂದಿಗೆ ನವೆಂಬರ್ 29ರ ಶನಿವಾರದಂದೂ ಸಡಗರ, ಸಂಭ್ರಮದೊಂದಿಗೆ ಆರಂಭವಾಯಿತು.
ಶ್ರೀ ಮಾಣಿಕಪ್ರಭುಗಳ ಜಾತ್ರೆ ಮತ್ತು ದತ್ತ ಜಯಂತಿ ಮಹೋತ್ಸವ ಅಂಗವಾಗಿ ಮಾಣಿಕ ಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಮಾಣಿಕ ಪ್ರಭುಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ಸರ್ವ ಭಕ್ತರಿಗೆ ಶ್ರೀ ಸಾಮಾಧಿಯ ಸ್ಪರ್ಶದರ್ಶನ ಹಾಗೂ ಮದ್ಯಾಹ್ನ 3 ಗಂಟೆಗೆ ಪ್ರಭು ಮಂದಿರದಲ್ಲಿ ತೀರ್ಥ ಸ್ನಾನ, ಯೋಗದಂಡ ಪೂಜೆ ನೆರವೇರಸಲಾಯಿತು.
ಸಾಯಂಕಾಲ ಪ್ರದೋಷ ಪೂಜೆ ನಂತರ ಪ್ರಸಾದ ವಿತರಿಸಲಾಯಿತು. ಭಾನುವಾರ ಸಕಲದೇವತಾ ನಿಮಂತ್ರಣ ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಗಣಪತಿ ಪೂಜೆ, ಚಂಡಿಪಾಠ, ಸಕಲದೇವತಾ ನಿಮಂತ್ರಣ, ರಾತ್ರಿ ಮಹಾಪ್ರಸಾದ ವಿತರಿಸಲಾಯಿತು. ಮಾಣಿಕಪ್ರಭು ಸಂಸ್ಥಾನದ ಚೈತನ್ಯ ರಾಜಪ್ರಭು ಅವರು ದಾಸೋಹ, ವಸತಿ ವ್ಯವಸ್ಥೆಯ ಉಸ್ತುವಾರಿ ವಹಿಸಿದರೆ. ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭುಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಜರುಗಿದವು.

ಡಿಸೆಂಬರ್ 1ರ ಸೋಮವಾರದಂದು ಪ್ರಭುಗಳ ಪುಣ್ಯತಿಥಿ ಪ್ರಯುಕ್ತ ಮುಂಜಾನೆ ಸುಪ್ರಭಾತ ಸೇವೆ, ಮಹಾರುದ್ರಾಭಿಷೇಕ್, ಜಪ, ರಾಜೋಪಚಾರ ಪೂಜೆ, ಆರಾಧನೆ, ಪ್ರದೋಷ ಪೂಜೆ, ರಾತ್ರಿ ಮಹಾಪ್ರಸಾದ ಜರುಗುವುದು.

ಮಂಗಳವಾರ 2 ರಂದು ಪ್ರಭುಗಳ ದ್ವಾದಶಿ ಅಂಗವಾಗಿ ಸಂಗಮ ಸ್ನಾನ, ಮಹಾರುದ್ರಾಭಿಷೇಕ, ರಾಜೋಪಚಾರ ಪೂಜೆ, ಪ್ರದೋಷಪೂಜೆ ಬಳಿಕ ಮಹಾಪ್ರಸಾದ ಕಾರ್ಯಕ್ರಮ ನಡೆಯುವುದು. ಬುಧವಾರ 3 ರಂದು ದಕ್ಷಿಣಾ ದರ್ಬಾರ, ಗುರುಪುಜೆ ಕಾರ್ಯಕ್ರಮದ ಪ್ರಯುಕ್ತ ಮುಂಜಾನೆ ಮಹಾರುದ್ರಭಿಷೇಕ, ಜಪ, ಮದ್ಯಾಹ್ನ ದಕ್ಷಿಣ ದರಬಾರ ಹಾಗೂ ಗುರುಪೂಜೆ, ಸಂಜೆ ಪ್ರವಚನ, ಪ್ರದೋಷ ಪೂಜೆ, ಮಹಾಪ್ರಸಾದ, ಗುರುವಾರ 4 ರಂದು 208ನೇ ಪ್ರಭು ಜಯಂತಿ ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಮಹಾರುದ್ರಾಭಿಷೇಕ, ಜಪ. ಮದ್ಯಾಹ್ನ ದರ್ಶನ ಹಾಗೂ ಪಾದ್ಯ ಪೂಜೆ, ಸಂಜೆ ರಾಜೋಪಚಾರ ಪೂಜೆ, ರಾತ್ರಿ ಮಹಾಪ್ರಸಾದ, ಶುಕ್ರವಾರ 5 ರಂದು ಪ್ರಭುಗಳ ದಿವ್ಯ ಸಾನಿಧ್ಯದಲ್ಲಿ ರಾತ್ರಿ ಪ್ರಭು ದರ್ಬಾರ, ಪ್ರಭು ಜನ್ಮೋತ್ಸವ, ಸಂಗೀತ ಸಭೆ ಕಾರ್ಯಕ್ರಮ ಜರುಗಲಿವೆ.