Home ಜಿಲ್ಲೆ ಮಾಣಿಕ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ರಾಷ್ಟಮಟ್ಟಕ್ಕೆ ಆಯ್ಕೆ

ಮಾಣಿಕ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ರಾಷ್ಟಮಟ್ಟಕ್ಕೆ ಆಯ್ಕೆ

ಹುಮನಾಬಾದ್,ಫೆ.19: ಅಹಮದಾಬಾದ್‍ನ ವೀರ ಸಾವರ್ಕರ್ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನಲ್ಲಿ ಫೆಬ್ರವರಿ 14 ರಿಂದ 16 ರವರೆಗೆ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ 2026-ಎರಡನೇ ಹಂತದ ಆಯ್ಕೆ ಸ್ಪರ್ಧೆಗಳ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಈಜುಗಾರ್ತಿಯರು ಉತ್ತಮ ಪ್ರದರ್ಶನ ನೀಡಿ, ಛತ್ತೀಸ್‍ಗಢದಲ್ಲಿ ನಡೆಯಲಿರುವ ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮಹಿಳೆಯರ ್ಠ4100 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕದ ಅಕ್ಷಿತಾ ಜಿ, ವೈಷ್ಣವಿ ವಿ, ಮೇಘಾಂಜಲಿ ಹಾಗೂ ನಿಧಿ ಎಸ್. ಅವರ ತಂಡವು 7:19.56 ಸಮಯದೊಂದಿಗೆ 3ನೇ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಅಂತಿಮ ಹಂತಕ್ಕೆ ಅರ್ಹತೆ ಗಳಿಸಿದೆ.

ಕರ್ನಾಟಕ ತಂಡದ ಅಕ್ಷಿತಾ ಜಿ, ವೈಷ್ಣವಿ ವಿ. ಅವರು ಹುಮನಾಬಾದ್ ದಿ ಮಾಣಿಕ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರಾಗಿದ್ದು, ಈಜು ತರಬೇತುದಾರ ಶಂಕರ ಕವಲಗಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ದಿ ಮಣಿಕ್ ಪಬ್ಲಿಕ್ ಸ್ಕೂಲ್ ಸಂಸ್ಥೆಯ ಅಧ್ಯಕ್ಷ ಅನಂದರಾಜ್ ಪ್ರಭು ಮಹಾರಾಜ್, ಕಾರ್ಯದರ್ಶಿ ಚಾರುದತ್ ಪ್ರಭು ಮಹಾರಾಜ್, ಪ್ರಾಂಶುಪಾಲರಾದ ಅರುಂಧತಿ ಭಾಗವತಾ ಅಭಿನಂದಿಸಿ, ವಿದ್ಯಾರ್ಥಿನಿಯರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಶಾಲಾ ಸಿಬ್ಬಂದಿ ವರ್ಗ ಹಾಗೂ ಪೆÇೀಷಕರು ಕ್ರೀಡಾಪಟುಗಳ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.