ರಾಜಮಹಲ್ ಲೇಔಟ್ ನಲ್ಲಿ ಮ್ಯಾನ್ ಹೋಲ್ ತುಂಬಿ ಚರಂಡಿ ನೀರು ರಸ್ತೆಗೆ: ದುರಸ್ಥಿಗೆ ಸಾರ್ವಜನಿಕರ ಆಗ್ರಹ

ಕಲಬುರಗಿ :ಅ.13: ಕಲಬುರಗಿ ಮಹಾನಗರ ಪಾಲಿಕೆ ವಾರ್ಡ್ ನಂ. 55ರ ರಾಜಮಹಲ್ ಲೇಔಟ್ ನಲ್ಲಿ ಮ್ಯಾನ್ ಹೋಲ್ ತುಂಬಿ ಒಳಚರಂಡಿ ನೀರು ರಸ್ತೆ ಮೇಲೆ ನಿಂತಿದ್ದು, ಸಾರ್ವಜನಿಕರು ಓಡಾಡಲು ಪರದಾಡುವಂತಾಗಿದೆ.

ರಾಜಮಹಲ್ ಲೇಔಟ್ ನ ಲಕ್ಹ್ಮೀ ದೇವಸ್ಥಾನದ ಹತ್ತಿರದಲ್ಲಿರುವ ರಸ್ತೆಯ ಮಧ್ಯೆದಲ್ಲಿ ಇರುವ ಮ್ಯಾನ್ ಹೋಲ್, ಕಳೆದ ನಾಲ್ಕೈದು ದಿನಗಳಿಂದ ತುಂಬಿ ಹರಿಯುತ್ತಿದ್ದು, ರಸ್ತೆ ಹಾಗೂ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿಯೇ ಚರಂಡಿ ನೀರು ನಿಲ್ಲುತ್ತಿದೆ. ಇದರಿಂದ
ಅಕ್ಕ ಪಕ್ಕದಲ್ಲಿರುವ ಮನೆಗಳಲ್ಲಿರುವ ಜನರು ಕೆಟ್ಟ ವಾಸನೆಯಿಂದ ತತ್ತರಿಸಿ ಹೋಗಿದ್ದಾರೆ. ಇನ್ನೂ ರಸ್ತೆ ಮೇಲೆ ಚರಂಡಿ ನೀರು ನಿಲ್ಲುತ್ತಿರುವುದರಿಂದ
ಪಾದಚಾರಿಗಳು, ವಾಹನ ಸವಾರರು ಚರಂಡಿ ನೀರಿನಲ್ಲಿಯೇ ಸಂಚಾರಿಸುವಂತಾಗಿದೆ. ಕೂಡಲೇ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಮ್ಯಾನ್ ಹೋಲ್ ಅನ್ನು ದುರಸ್ಥಿ ಮಾಡಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಂಡಬೇಕು ಎಂದು ರಾಜಮಹಲ್ ಲೇಔಟ್ ನ ನಿವಾಸಿಗಳು ಆಗ್ರಹಿಸಿದ್ದಾರೆ.