
ಕಲಬುರಗಿ,ಜ.29-ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾದ ಆರೋಪಿಗೆ ಇಲ್ಲಿನ 3ನೇ ಜೆ.ಎಂ.ಎಫ್.ಸಿ.ನ್ಯಾಯಾಲಯ 1 ಸಾವಿರ ರೂ.ದಂಡ ಮತ್ತು 6 ತಿಂಗಳ ಶಿಕ್ಷೆ ವಿಧಿಸಿದೆ.
2023ರಲ್ಲಿ ನಂದೂರ (ಕೆ) ಹತ್ತಿರ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಲಕ್ಷ್ಮಣ ಎಂಬಾತ ಮೃತಪಟ್ಟಿದ್ದ. ಈ ಸಂಬಂಧ ಆರೋಪಿ ಬಸವರಾಜ ಮರಗೋಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಅಧಿಕಾರಿಗಳಾದ ಗೋಪಾಲ ಆರ್.ರಾಠೋಡ್ ಮತ್ತು ಬಸವರಾಜ ತೇಲಿ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ 3ನೇ ಜೆ.ಎಂ.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶರಾದ ಲಲೀತಾ ಕುದರಿಮತಿ ಅವರು ವಾದ-ವಿವಾದಗಳನ್ನು ಆಲಿಸಿ ಆರೋಪಿ ಬಸವರಾಜ ಮರಗೋಳಗೆ 1 ಸಾವಿರ ರೂ.ದಂಡ ಹಾಗೂ 6 ತಿಂಗಳ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವಶರಣಪ್ಪ ಹೋತಪೇಟ ಅವರು ವಾದ ಮಂಡಿಸಿದ್ದರು.
























