ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಜಮಖಂಡಿ:ಅ.26: ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ವ್ಯಕ್ತಿ ಓರ್ವ ನಿಗೆ ವಿದ್ಯುತ್ ತಂತಿ ತಗುಲಿ ಮೃತ ಪಟ್ಟಿರುವ ಘಟನೆ ಜರುಗಿದೆ.

ಶ್ರೀಶೈಲ ಗೋವಿಂದ ಗಸ್ತಿ(22) ದುರ್ದೈವಿ.ಈತ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದವನಾಗಿದ್ದು ಶನಿವಾರ ಸಾಯಂಕಾಲ ಹುಲ್ಯಾಳ ಗ್ರಾಮದ ತಮ್ಮ ಜೆಮಿನಿನಲ್ಲಿ ಕೋಳಿ ಸೆಡ್ಡು ನಿರ್ಮಾಣ ಮಾಡುವ ಸಂಧರ್ಭದಲ್ಲಿ ವಿದ್ಯುತ್ ತಂತಿ ತಗುಲಿದೆ ತಕ್ಷಣ ಅಲ್ಲೆ ಇದ್ದ ಆತನ ಸಹೋದರ ಹಾಗೂ ಆತನ ತಂದೆ ತಂತಿಯನ್ನು ಬಿಡಿಸಿ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ಸಾಗಿಸುವ ಸಂಧರ್ಭದಲ್ಲಿ ವ್ಯಕ್ತಿ ಮೃತ ಪಟ್ಟಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಸ್ಥಳಕ್ಕೆ ಜಮಖಂಡಿ ಗ್ರಾಮಿಣ ಪೆÇೀಲಿಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ

ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ.