
ಚಿತ್ತಾಪುರ;ಮೇ.೫: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಅಬ್ಬರಕ್ಕೆ ಸರ್ವಾಧಿಕಾರಿಯಂತೆ ಮೆರೆಯುತ್ತಿರುವ ಪಕ್ಷಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಧೂಳಿಪಟವಾಗಿದೆ ಎಂದು ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಪಕ್ಷಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡೆದ ಪ್ರಯುಕ್ತ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಯಾರಿಗೂ ಎದೆ ಗುಂದದೆ ಧೈರ್ಯದಿಂದ ಚುನಾವಣೆ ಮಾಡಿದ್ದರಿಂದ ೧೫ ವರ್ಷದ ಮಮತಾ ಬ್ಯಾನರ್ಜಿ ಅಡಳಿತ ಧೂಳಿಪಟವಾಗಿದೆ, ಅದರಂತೆ ಚಿತ್ತಾಪುರ ಕ್ಷೇತ್ರದಲ್ಲೂ ಯಾರಿಗೂ ಹೆದರುವುದು ಹಾಗೂ ಎದೆ ಗುಂದುವುದು ಅವಶ್ಯಕತೆ ಇಲ್ಲ ಧೈರ್ಯದಿಂದ ಇರಿ, ಬಿಜೆಪಿ ವಿಶ್ವದಲ್ಲೇ ದೊಡ್ಡ ಪಕ್ಷವಾಗಿದೆ ಹೀಗಾಗಿ ಯಾರಿಂದಲೂ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಬಿಜೆಪಿಯವರು ರಸ್ತೆ ಮೇಲೆ ಓಡಾಡದಂತೆ ಮಾಡಲಾಗುವುದು ಹಾಗೂ ಆರ್’ಎಸ್‌ಎಸ್ ಪಥ ಸಂಚಲನ ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಅದ್ದೂರಿಯಾಗಿ ನಡೆಯಿತು. ಇಡೀ ದೇಶ ತಿರುಗಿ ನೋಡುವಂತಾಯಿತು ಎಂದರು.
ಪಕ್ಷಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಎಂಬ ರಾಕ್ಷಸಿ ರೂಪದ ಸರ್ಕಾರ, ಸರ್ವಾಧಿಕಾರಿಯಾಗಿ ದಬ್ಬಾಳಿಕೆ ನಡೆಸಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಸಮರ್ಥವಾಗಿ ಎದುರಿಸುವ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದ್ದರಿAದ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಬಹುಮತ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಪಕ್ಷಿಮ ಬಂಗಾಳದಲ್ಲಿ ಎಸ್‌ಐಆರ್ ನಡೆದಿದ್ದರಿಂದ ಸಾವಿರಾರು ಬೋಕಸ್ ಮತಗಳು ರದ್ದಾಗಿದ್ದು ರಾಕ್ಷಸಿ ಸರ್ಕಾರ ಧೂಳಿಪಟವಾಗಿದೆ, ಚಿತ್ತಾಪುರ ಕ್ಷೇತ್ರದಲ್ಲಿಯೂ ಎಸ್‌ಐಆರ್ ಆಗಲಿದ್ದು ೧೮ ಸಾವಿರ ಬೋಕಸ್ ಮತಗಳು ಕಟ್ ಆಗಲಿವೆ, ಆಗ ಇಲ್ಲಿಯೂ ಕಾಂಗ್ರೆಸ್ ಧೂಳಿಪಟ ಆಗಲಿದೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಇಲ್ಲಿನ ಶಾಸಕರಿಗೆ ಭವಿಷ್ಯ ಇಲ್ಲ ಸುಮ್ಮನೆ ಅವರ ಹಿಂದೆ ಓಡಾಡಬೇಡಿ, ತಮ್ಮ ಕೆಲಸ ಕಾರ್ಯಗಳಿಗಾಗಿ ನಮ್ಮವರೇ ಕೆಲವರು ಅವರಿಗೆ ಭೇಟಿ ನೀಡಿ ಫೋಟೋ ಶೂಟ್ ಮಾಡುತ್ತಿದ್ದಾರೆ, ಇದೆಲ್ಲ ನಮ್ಮ ಪಕ್ಷದ ನಾಯಕರು ಗಮನ ಹರಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಭಜಂತ್ರಿ, ಪುರಸಭೆ ಮಾಜಿ ಸದಸ್ಯ ಶಾಮ್ ಮೇಧಾ, ನ್ಯಾಯವಾದಿ ಅಶ್ವಥ್ ರಾಠೋಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಯುವ ಅಧ್ಯಕ್ಷ ದೇವರಾಜ್ ತಳವಾರ, ಮುಖಂಡರಾದ ಶ್ರೀಕಾಂತ್ ಸುಲೇಗಾಂವ, ಬಸವರಾಜ ಸಂಕನೂರ, ರಮೇಶ್ ಣಮಬೊಮ್ಮನಳ್ಳಿ, ಪ್ರಭು ಗಂಗಾಣಿ, ಪಂಕಜ್ ಗೌಡ್, ಸುರೇಶ್ ಬೆನಕನಳ್ಳಿ, ಬಸವರಾಜ ಹೂಗಾರ, ಶರಣಪ್ಪ ಸಣಮೋ, ಕಾಶಿನಾಥ ಸಣಮೋ, ಆನಂದ ಕಾಶಿ, ಶರಣು ತೊನಸನಳ್ಳಿ, ಸಾಗರ ಚವ್ಹಾಣ, ಶಿವರಾಮ್ ಚವ್ಹಾಣ, ರಮೇಶ್ ಕಾಳನೂರ, ಸುನೀಲ್ ಚವ್ಹಾಣ, ಸಂಜಯ್ ರಾಠೋಡ, ಗೂಳಿ ಡಿಗ್ಗಿ ಸೇರಿದಂತೆ ಇತರರು ಇದ್ದರು.
ಬಿಜೆಪಿ ಮುಖಂಡರು ಜೈ ಗೋಷಗಳು ಕೂಗಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

























