
ಯಾದಗಿರಿ:ಮಾ.೩:ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬAಧಿಸಿದAತೆ ಪೀಡಿತ ಬಾಲಕಿಯನ್ನು ಗುರುತಿಸಬಹುದಾದ ಯಾವುದೇ ಮಾಹಿತಿ, ಫೋಟೋಗಳು ಅಥವಾ ವಿಡಿಯೋ ಕ್ಲಿಪ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಹಂಚಿಕೊಳ್ಳುವುದು ಅಥವಾ ಫಾರ್ವರ್ಡ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಪ್ರಕರಣವು ಅತೀ ಸಂವೇದನಾಶೀಲವಾಗಿರುವುದರಿAದ ಬಾಲಕಿಯ ಗೌಪ್ಯತೆ ಹಾಗೂ ಮಾನಸಿಕ ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕಾನೂನುಬದ್ಧ ಹೊಣೆಗಾರಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೀಡಿತೆಯ ಹೆಸರು, ವಿಳಾಸ, ಕುಟುಂಬ ಸದಸ್ಯರ ವಿವರಗಳು ಅಥವಾ ಸಂಬAಧಿತ ದೃಶ್ಯಾವಳಿಗಳನ್ನು Whಚಿಣsಂಠಿಠಿ, ಈಚಿಛಿebooಞ, Iಟಿsಣಚಿgಡಿಚಿm ಸೇರಿದಂತೆ ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಹಂಚುವುದು ಪೋಕ್ಸೋ ಕಾಯ್ದೆಯ ಉಲ್ಲಂಘನೆಯಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬAಧಿಸಿ ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ ೨೫-೦೮-೨೦೨೬ ರಂದು ಶಹಾಪೂರದ ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ತಂದೆ ಉಮಾಪತಿ ಅವರ ದೂರಿನ ಮೇರೆಗೆ ಮಲ್ಲಿಕಾರ್ಜುನ ಮುತ್ಯಾ ಸಾ: ಮಹಲ್ ರೋಜಾ ಇವರ ವಿರುದ್ಧ ಗುನ್ನೆ ನಂ. ೨೫/೨೦೨೬ರಡಿ ಕಲಂ ೭೫(೨) ಬಿ.ಎನ್.ಎಸ್ ಕಾಯ್ದೆ-೨೦೨೩ ಹಾಗೂ ಕಲಂ ೧೨ ಪೋಕ್ಸೋ ಕಾಯ್ದೆ-೨೦೧೨ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನಧಿಕೃತ ಮಾಹಿತಿ ಹರಡುವುದು ತನಿಖೆಗೆ ಅಡ್ಡಿಯಾಗುವುದಲ್ಲದೆ, ಪೀಡಿತೆಯ ಗೌರವಕ್ಕೂ ಧಕ್ಕೆ ತರುತ್ತದೆ. ಸೈಬರ್ ವಿಭಾಗವು ಇಂತಹ ಚಟುವಟಿಕೆಗಳ ಮೇಲೆ ನಿಗಾವಹಿಸಿದ್ದು, ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಯಾವುದೇ ಅಪರಿಷ್ಕೃತ ಮಾಹಿತಿ ಅಥವಾ ದೃಶ್ಯಾವಳಿ ಸಿಕ್ಕಲ್ಲಿ ಅದನ್ನು ಫಾರ್ವರ್ಡ್ ಮಾಡುವುದನ್ನು ತಪ್ಪಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.



























