
ಚಿಟಗುಪ್ಪಾ,ಮೇ.೨೭-ಗ್ರೇಡ್ ಟೂ ತಹಸೀಲ್ದಾರರಾದ ಜಯಶ್ರೀ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಭಾಷ ಚಂದ್ರ ನಿಡುಗುಂದಿ ಇವರನ್ನು ಗ್ರೇಟ ೨ ತಸಿಲ್ದಾರ್ ಜಯಶ್ರೀ ಹಾಗೂ ಅವರ ಪತಿ ಮತ್ತು ಇತರ ನಾಲ್ಕು ಜನ ಸೇರಿ ಅಪಹರಿಸಿಕೊಂಡು ಹೋಗಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯ. ಈಗಾಗಲೇ ಇದರ ಬಗ್ಗೆ ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಕೂಡ ದಾಖಲೂ ಆಗಿದ್ದು, ಗ್ರೇಡ್ ೨ ತಹಸಿಲ್ದಾರ ಜಯಶ್ರೀ ಅವರನ್ನು ತಕ್ಷಣ ಅಮಾನತು ಮಾಡಿ ಬಂಧಿಸಬೇಕು ಮತ್ತು ಇಲಾಖೆಯಿಂದ ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರ ಪತಿ ಹಾಗೂ ಸಂಗಡಿಗರಿಗೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಒಂದು ವೇಳೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ವಿಳಂಬ ಮಾಡಿದಲ್ಲಿ ತಹಸೀಲ್ ಕಛೇರಿ ಎದುರುಗಡೆ ಸತ್ಯಾಗ್ರಹ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಪಾಟೀಲ, ವಿರೇಶ ತೂಗಾವ, ಸಿದ್ದಲಿಂಗಪ್ಪ ಪಾಟೀಲ್ ಬೆಳಖೆರಾ, ರವಿ ಶಿವಪೂಜಿ, ಡಾ.ರಾಜಶೇಖರ, ಸಿಧರಾಮ ಗೌಳಿ, ಪುರಸಭೆ ಸದಸ್ಯ ಮುಜಾಫರ್ ಪಟೇಲ್, ಸುಭಾಷ್ ಕುಂಬಾರ, ಅಣೆಪ್ಪಾ ಇಟಗಾ, ಪ್ರವೀಣ್ ರಾಜ್ಪುರಿ, ಅಮಿತ್ ಹೊಸ ದೊಡ್ಡಿ, ಉದಯ್, ರಶಿದ್ ಪಟೇಲ್ ಭಾಗವಹಸಿದ್ದರು.