Home ಜಿಲ್ಲೆ ಕಲಬುರಗಿ ಫೆ.20 ರಿಂದ ಮಳ್ಳಿ ತುಳಜಪ್ಪಯ್ಯಸ್ವಾಮಿ ಆರಾಧನಾ ಮಹೋತ್ಸವ

ಫೆ.20 ರಿಂದ ಮಳ್ಳಿ ತುಳಜಪ್ಪಯ್ಯಸ್ವಾಮಿ ಆರಾಧನಾ ಮಹೋತ್ಸವ

ಕಲಬುರಗಿ,ಫೆ.14: ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಮೂರು ದಿನಗಳ ಸದ್ಗುರು ಶ್ರೀ ತುಳಜಪ್ಪಯ್ಯ ಸ್ವಾಮಿ ಆರಾಧನಾ ಮಹೋತ್ಸವ ಫೆ.20 ರಿಂದ 22 ರವರೆಗೆ ನಡೆಯಲಿದೆ.
ಪವಾಡಪುರುಷರಾದ ಸದ್ಗುರು ಶ್ರೀ ತುಳಜಪ್ಪಯ್ಯನವರು ಕ್ರಿಶ. 1769 ಫಾಲ್ಗುಣ ಶುದ್ಧ ಚೌತಿ ಗುರುವಾರದಂದು ಮಳ್ಳಿ ಗ್ರಾಮದಲ್ಲಿ ಜೀವಂತ ಸಮಾಧಿ ಹೊಂದಿದ್ದರು. ಆರಾಧನಾ ಪ್ರಯುಕ್ತ ಮಳ್ಳಿ ಗ್ರಾಮದ ಹಳ್ಳದ ತೀರದ ಶ್ರೀ ತುಳಜಪ್ಪಯ್ಯಸ್ವಾಮಿ ಮಠ ಮತ್ತು ಜಾಗೀರದಾರರ( ಸರ್ನಾಡ) ಭವ್ಯ ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವವು.
ಫೆ 20 ರಂದು ಮುಖ್ಯ ಪ್ರತಿಮಾ ಉದ್ಧರಣ,ಅಂಬಾಭವಾನಿ ಮೂರ್ತಿ ಪೂಜೆ ಮತ್ತು ಧ್ವಜಾರೋಹಣ ಜರುಗುವದು.21 ರಂದು ವಿಪ್ರರ ಪಾದಪೂಜೆ,ರುದ್ರಾಭಿಷೇಕ ಮತ್ತು ಭಜನೆ,ಸಂಗೀತ ಕಾರ್ಯಕ್ರಮ ನಡೆಯಲಿದೆ. 22 ರಂದು ಗೋಪಾಲ ಕಾವಲಿ ಮತ್ತು ಪಲ್ಲಕ್ಕಿ ಮೆರವಣಿಗೆ ಜರುಗುವದು.ಸತೀಶ ಭಟ್ಟ ಜೋಶಿ ಅವರು ಮೂರು ದಿನಗಳ ಪರ್ಯಂತ ಪೂಜೆ ಪ್ರವಚನ ,ರುದ್ರಾಭಿಷೇಕ ಮತ್ತು ವೇದಘೋಷ ನಡೆಸಿಕೊಡುವರು.ಪ್ರತಿದಿನ ಮಧ್ಯಾಹ್ನ 12.30 ರಿಂದ ಅನ್ನ ಪ್ರಸಾದ ನಡೆಯಲಿದೆ.ಪೀಠಾಧಿಪತಿ ಭೀಮರಾವ ಹ.ಸರ್ನಾಡ ಅವರ ನೇತೃತ್ವದಲ್ಲಿ ಸಕಲ ಕಾರ್ಯಕ್ರಮ ಜರುಗಲಿವೆ ಎಂದು ಸಕಲ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.