Home ಜಿಲ್ಲೆ ಕಲಬುರಗಿ ಕಲ್ಯಾಣಕರ್ ಸೇವೆಗೆ ಮಲ್ಲಣ್ಣಪ್ಪ ಸ್ವಾಮೀಜಿ ಶ್ಲಾಘನೆ

ಕಲ್ಯಾಣಕರ್ ಸೇವೆಗೆ ಮಲ್ಲಣ್ಣಪ್ಪ ಸ್ವಾಮೀಜಿ ಶ್ಲಾಘನೆ

ಜೇವರ್ಗಿ: ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಸಾಯಿಬಣ್ಣ ಬಿ. ಕಲ್ಯಾಣಕರ ಅವರ ಸೇವೆಯು ಎಂದು ತೊನಸನಹಳ್ಳಿಯ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ತಾಲ್ಲುಕು ಸ್ನೇಹಿತರ ಬಳಗದಿಂದ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಸಾಯಿಬಣ್ಣ ಬಿ. ಕಲ್ಯಾಣಕರ್ ಅವರ ವಯೋನಿವೃತ್ತಿ ಗೌರವ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ೫ ಮಾತನಾಡಿದ ಅವರು,ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸಿದ್ದರಿಂದಲೇ ಅವರ ಪ್ರಾಮಾಣಿಕತೆಗೆ ಸೇರಿದ ಜನವೆ ಸಾಕ್ಷಿ ಎಂದರು.
ಅಧ್ಯಕ್ಷತೆಯನ್ನು ತಹಸಿಲ್ದಾರ್ ಶ್ರೀಮತಿ ಅಂಜುಮ್ ತಬಸ್ಸುಮ್ ಅವರು ವಹಿಸಿದ್ದರು. ಉದ್ಘಾಟನೆಯನ್ನು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಬಸವರಾಜ್ ಪಾಟೀಲ್ ನರಿಬೋಳ್ ಅವರು ನೆರವೇರಿಸಿದರು. ಜ್ಯೋತಿಯನ್ನು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲ್ಲೂಕು ಸಮಿತಿ ತಾಲೂಕು ಅಧ್ಯಕ್ಷ ಶೌಕತ್ ಆಲಿ ಆಲೂರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಾನಪ್ಪಗೌಡ ಮುಖಂಡರಾದ ವಸಂತರಾವ ನರಿಬೋಳ್, ತಮ್ಮಣ್ಣ ಬಾಗೇವಾಡಿ, ಭೀಮರಾಯ್ ನಗನೂರ್ ಅವರು ಬೆಳಗಿಸಿದರು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಮಹಿಬೂಬ ಆಲಿ, ನ್ಯಾಯವಾದಿ ರಮೇಶ್ ಬಾಬು, ಚನ್ನಮಲ್ಲಯ್ಯ ಹಿರೇಮತ್, ಎಸ್.ಕೆ. ಬಿರಾದಾರ್. ಮೈಲಾರಿ ಗುಡೂರ್, ಚಂದ್ರಶೇಖರ್ ಸೀರಿ, ಚಂದ್ರಶೇಕರ್ ತುಂಬಿಗಿ, ಸಿದ್ರಾಮ್ ಕಟ್ಟಿ, ಮರೆಪ್ಪ ಬೇಗಾರ್, ಗಿರೀಶ್ ತುಂಬಗಿ, ರವಿ ಕುಳಗೇರಿ ಮುಂತಾದವರು ಉಪಸ್ಥಿತರಿದ್ದರು.ಭಗವಂತರಾಯ್ ಬೆಣ್ಣೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಕೆರೂರ್ ಅವರು ಸ್ವಾಗತಿಸಿದರು. ಶ್ರೀಹರಿ ಕರಕಳ್ಳಿ ಅವರು ವಂದಿಸಿದರು.