ಮಹಾತ್ಮ ಜ್ಯೋತಿಬಾ ಫುಲೆ ರತ್ನಪ್ರಶಸ್ತಿಗೆ ಮಲ್ಲಣ್ಣ ಕೊಡಚಿ ಆಯ್ಕೆ

ಜೇವರ್ಗಿ :ಜ.೨೧:ಮಹಾ ಕ್ರಾಂತಿಕಾರಿ ಮಹಾತ್ಮ ಜ್ಯೋತಿಬಾಪುಲೆ ರತ್ನ ಪ್ರಶಸ್ತಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಾಗರ ಬಣ ಜಿಲ್ಲಾ ಖಜಾಂಚಿ ಆದ ಮತ್ತು ಬೌದ್ಧ ಮಹಾಸಭಾದ ಅಧ್ಯಕ್ಷರಾದ ಮಲ್ಲಣ್ಣ ಕೊಡಚಿ ಆಯ್ಕೆ ಮಾಡಲಾಗಿದೆ ಇವರು ಸುಮಾರು ಮೂರು ದಶಕಗಳ ಕಾಲ ದಲಿತ ಸಂಘಟನೆಗಳ ಮುಖಾಂತರ ಹೋರಾಟ ಮಾಡಿದ ಪ್ರಯುಕ್ತ ಇವರಿಗೆ ಮಹಾತ್ಮಾ ಜ್ಯೋತಿಬಾಪುಲೆ ರತ್ನ ಪ್ರಶಸ್ತಿ ಆಯ್ಕೆ ಆಗಿದ್ದಾರೆಂದು ಪ್ರಬುದ್ಧ ಡೆವಲಪ್ಮೆಂಟ್ ಫೌಂಡೇಶನ್ ನಿರ್ದೇಶಕರಾದ ಧರ್ಮಣ್ಣ ಕೋಣೆಕರ ಕಲಬುರಗಿ ತಿಳಿಸಿದ್ದಾರೆ ಬರುವ ೨೪ರಂದು ಕಲಬುರ್ಗಿ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರಧಾನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಿದ್ದಾರೆ