ಕರಜಗಿ :ಸೆ.30:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರಿಗೆ ಅಫಜಲಪುರ ಪಟ್ಟಣದ ಮಳೇಂದ್ರ ಮಠದ ವತಿಯಿಂದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಅನ್ನ ದಾಸೋಹ ಸೇವೆ ಮಾಡಿ ಮಾನವೀಯತೆ ಮೆರೆದರು.ಅವರು ಸೋಮವಾರ ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ ನಿಮ್ಮೆಲ್ಲರ ಕಷ್ಟಗಳೊಂದಿಗೆ ನಾವು ಇದ್ದೇವೆ.ಸಂಕಷ್ಟದ ಸಮಯದಲ್ಲಿ ಮಾನವೀಯತೆ ತೋರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಈಗ ಸಂತ್ರಸ್ತರಿಗೆ ಮಠದ ವತಿಯಿಂದ ಸಹಾಯ ಮಾಡಲಾಗುತ್ತಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಹಾಲಯ್ಯ ಹಿರೇಮಠ ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಚಂದ್ರಶೇಖರ ಕರಜಗಿ ಶಿವಶರಣಪ್ಪ ರೋಡಗಿ ವಿಶ್ವನಾಥ ಅಜಗೊಂಡ ಅಣ್ಣಾರಾವ ಮುಜಗೊಂಡ ಗ್ರಾ ಪಂ ಸದಸ್ಯ ಬಸವರಾಜ ವಾಯಿ ವಿವೇಕಾನಂದ ಕೋಗಟನೂರ ಯಶ್ವಂತ ಕರೂಟಿ ಅಪ್ಪಾಸಾಬ ಹೊಸೂರಕರ ಸಂತೋಷ ಅಲ್ಲಾಪೂರ ಜಗದೀಶ ದೇಶಟ್ಟಿ ಸಂತೋಷ ಮುಜಗೊಂಡ ಶಿವಾನಂದ ಕೋರಳ್ಳಿ ವಾಲ್ಮೀಕಿ ಚಿಕ್ಕಮಣೂರ ಕಲ್ಲಪ್ಪ ಪ್ಯಾಟಿ ಇತರರಿದ್ದರು























