
ಕಲಬುರಗಿ : ಫೆ.27:ಇದೇ ದಿ.28ರಂದು ಜರುಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯು ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತವಾದದ್ದು, ಅದನ್ನು ಅತ್ಯಂತ ಬದ್ಧತೆ, ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜೇವರ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕ ರವೀಂದ್ರಕುಮಾರ ಸಿ. ಬಟಗೇರಿ ಹೇಳಿದರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಪರೀಕ್ಷಾ ಪೂರ್ವ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರದ ಓಎಸ್ ಮಲ್ಲಿಕಾರ್ಜುನ ದೊಡ್ಡಮನಿ, ಮಾರ್ಗದರ್ಶಕ ಶಂಕ್ರೆಪ್ಪ ಹೊಸದೊಡ್ಡಿ, ಎಪಿಸಿ ಎಚ್.ಬಿ.ಪಾಟೀಲ ಮಾಹಿತಿ ನೀಡಿದರು. ಜಂಟಿ ಮುಖ್ಯ ಅಧಿಕ್ಷಕಿ ಶ್ವೇತಾ, ಹೆಚ್ಚುವರಿ ಮುಖ್ಯ ಅಧಿಕ್ಷಕಿ ಸುವರ್ಣಲತಾ ಭಂಡಾರಿ ಹಾಗೂ ಕಾಲೇಜಿನ ಉಪನದಯಾಸಕರು, ನಿಯೋಜಿತ ಕೊಠಡಿ ಮೇಲ್ವಿಚಾರಕರು ಭಾಗವಹಿಸಿದ್ದರು.



























