ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಯಶಸ್ವಿಗೊಳಿಸಿ: ಶಾಸಕ ಪ್ರಭು ಚವ್ಹಾಣ

ಸಂಜೆ ವಾಣಿ ವಾರ್ತೆ
ಕಮಲನಗರ:ಅ.೨೮:ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೂತ್ ಮಟ್ಟದ ಏಜೆಂಟ್‌ಗಳು(ಬಿಎಲ್‌ಎ-೨) ತಮ್ಮ ಬೂತ್‌ಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಭಾರತೀಯ ಜನತಾ ಪಕ್ಷ ಔರಾದ(ಬಿ) ಮಂಡಲ ವತಿಯಿಂದ ಅ.೨೬ರಂದು ಕಮಲನಗರ ತಾಲ್ಲೂಕಿನ ಠಾಣಾಕುಶನೂರ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಔರಾದ(ಬಿ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಲ್‌ಎ-೨ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಚುನಾವಣೆಗಳು ಪಾರದರ್ಶಕವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುತ್ತಿದ್ದು, ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಬೂತ್‌ನಿಂದ ಹೊರ ಹೋದವರು, ಬೋಗಸ್ ಮತದಾರರು, ಎರಡು ಕಡೆ ಹೆಸರಿದ್ದವರು, ಮರಣ ಹೊಂದಿದವರ ಹೆಸರುಗಳಿದ್ದರೆ ಡಿಲೀಟ್ ಮಾಡಿಸುವುದು ಬೂತ್ ಏಜೆಂಟರ ಜವಾಬ್ದಾರಿಯಾಗಿದೆ ಎಂದರು.
ಬಿಎಲ್‌ಓಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ತಮ್ಮ ಗ್ರಾಮಗಳಿಗೆ ಆಗಮಿಸಿದ ಸಂದರ್ಭದಲ್ಲಿ ಬೂತ್ ಏಜೆಂಟರು ಅವರ ಜತೆಯಲ್ಲಿದ್ದುಕೊಂಡು ಅಗತ್ಯ ಸಹಕಾರ ನೀಡಬೇಕು. ಮೃತರಾದವರು, ಗ್ರಾಮ, ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು ಮತ್ತು ಒಂದಕ್ಕಿAತ ಹೆಚ್ಚು ಕಡೆಗಳಲ್ಲಿ ಬರುವ ಹೆಸರುಗಳನ್ನು ತೆಗೆದು ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸಹಕರಿಸಬೇಕೆಂದು ಹೇಳಿದರು.
ಒಂದು ರಾಷ್ಟç ಒಂದು ಮತದಾರರ ಪಟ್ಟಿ ಮಾಡಬೇಕೆಂಬ ಸಂಕಲ್ಪದೊAದಿಗೆ ಪ್ರಧಾನಿಯವರು ಕೆಲಸ ಮಾಡುತ್ತಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮತ್ತಿತರೆ ಎಲ್ಲ ಚುನಾವಣೆಗಳಲ್ಲಿ ನಿಜವಾದ ಮತದಾರರು ಮಾತ್ರ ಮತದಾನ ಮಾಡುವಂತಾಗಬೇಕೆAಬ ಉದ್ದೇಶವಿದೆ. ಈ ದಿಶೆಯಲ್ಲಿ ಬೂತ್ ಏಜೆಂಟರ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದೆ. ಅವರು ಮಾಡಬೇಕಾದ ಕೆಲಸ ಕಾರ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಪಕ್ಷದಿಂದ ಅಗತ್ಯ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಲಾಗಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಿರ್ದೇಶನ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಮರನಾಥ ಪಾಟೀಲ ಅವರು ಮಾತನಾಡಿ, ದೇಶದಲ್ಲಿ ಮತದಾನ ವ್ಯವಸ್ಥೆಯನ್ನು ಸುಧಾರಿಸಲು ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ದಿಶೆಯಲ್ಲಿ ಪಕ್ಷದಿಂದ ಮೂರು ತಿಂಗಳವರೆಗೆ ಅಭಿಯಾನ ನಡೆಸುತ್ತಿದ್ದು ಬೂತ್ ಏಜೆಂಟರು ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಮಾತನಾಡಿ, ಚುನಾವಣೆಗಳ ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯಬಾರದು ಮತ್ತು ಬೋಗಸ್ ಮತದಾನವನ್ನು ತಡೆಯುವ ಉದ್ದೇಶದಿಂದ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ. ಬೂತ್ ಮಟ್ಟದಲ್ಲಿರುವ ಪಕ್ಷದ ಬೂತ್ ಏಜೆಂಟರು ತಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ, ಆತ್ಮನಿರ್ಭರ ಅಭಿಯಾನದ ಜಿಲ್ಲಾ ಸಂಚಾಲಕ ಬಾಬು ವಾಲಿ, ಮುಖಂಡರಾದ ವಸಂತ ಬಿರಾದಾರ, ಸತೀಷ ಪಾಟೀಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಜೆ, ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ನಿಲೇಶ ರಕ್ಷಾö??ಳೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷಿö??Ã ಕೌಟಗೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವಾಜಿರಾವ ಕಾಳೆ, ವೀರು ದಿಗ್ವಾಲ್, ಅಭಿಯಾನದ ತಾಲ್ಲೂಕು ಪ್ರಮುಖರಾದ ಪ್ರವೀಣ ಕಾರಬಾರಿ, ಸಚಿನ ರಾಠೋಡ, ಪ್ರತೀಕ ಚವ್ಹಾಣ, ಖಂಡೋಬಾ ಕಂಗಟೆ, ಧನರಾಜ ವಡೆಯರ್, ಶಿವಕುಮಾರ ಸಜ್ಜನಶೆಟ್ಟೆ, ಪ್ರಭುರಾವ ಜೀರ್ಗೆ, ಬಾಬುರಾವ ವಾಗ್ಮಾರೆ, ಸಾಗರ ಪಾಟೀಲ, ರಂಗರಾವ ಜಾಧವ, ಶಿವಾನಂದ ವಡ್ಡೆ, ಶಿವು ಜುಲ್ಫೆ, ಬಾಬುರಾವ ತೋರ್ಣಾವಾಡಿ, ಓಂಕಾರ ಸ್ವಾಮಿ, ಬಂಟಿ ರಾಂಪೂರೆ, ರಾಜಕುಮಾರ ಸೋರಾಳೆ, ರವೀಂದ್ರ ರೆಡ್ಡಿ, ಸಚಿನ ಬಿರಾದಾರ, ಸಂಜು ಮುರ್ಕೆ, ಉದಯ ಸೋಲಾಪೂರೆ, ಪ್ರಕಾಶ ಜೀರ್ಗೆ, ಬಸವರಾಜ ಹಳ್ಳೆ, ಜಾಖೇರ್ ಶೇಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸ್ಟಿಕ್ಕರ್ ಬಿಡುಗಡೆ: ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಅಭಿಯಾನದ ಸ್ಟಿಕ್ಕರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಆತ್ಮನಿರ್ಭರ ಅಭಿಯಾನದ ಜಿಲ್ಲಾ ಸಂಚಾಲಕ ಬಾಬು ವಾಲಿ ಅವರು ಆತ್ಮನಿರ್ಭರ ಅಭಿಯಾನದ ಕುರಿತ ಪ್ರಮಾಣ ವಚನವನ್ನು ಬೋಧಿಸಿದರು. ಪಕ್ಷದ ಕಾರ್ಯಕರ್ತರು ಎಲ್ಲ ಮನೆ ಬಾಗಿಲುಗಳ ಮೇಲೆ ಆತ್ಮನಿರ್ಭರ ಅಭಿಯಾನದ ಸ್ಟಿಕ್ಕರ್‌ಗಳನ್ನು ಅಂಟಿಸಿ ಜಾಗೃತಿ ಮೂಡಿಸಬೇಕೆಂದು ಕೋರಿದರು.