
ಧಾರವಾಡ, ಮಾ1: ಹುಬ್ಬಳ್ಳಿ-ಧಾರವಾಡ ಜೋಡಿ ನಗರಗಳು ಏಕೀಕೃತ ಆಡಳಿತ ವ್ಯವಸ್ಥೆಯಡಿ ಬೆಳವಣಿಗೆ ಕಂಡಾಗ ಮಾತ್ರ ಸಮತೋಲನಾಭಿವೃದ್ಧಿ ಸಾಧ್ಯ ಎಂದು ಮಾಜಿ ಮಹಾಪೌರ, ಪಾಲಿಕೆ ಸಭಾನಾಯಕರಾದ ಈರೇಶ ಅಂಚಟಗೇರಿ ಹೇಳಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾದ ಂಡಿಚಿviಟಿಜ ಃeಟಟಚಿಜ ಅವರು ಹುಬ್ಬಳ್ಳಿ-ಧಾರವಾಡವನ್ನು ಮರು ಏಕೀಕರಿಸಿ ಬೃಹತ್ ಮಹಾನಗರ ಪಾಲಿಕೆಯಾಗಿಸಬೇಕೆಂಬ ನೂತನ ನಿಲುವು ಪ್ರಕಟಿಸಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿದೆ. ಉತ್ತರ ಕರ್ನಾಟಕದ ಹಕ್ಕುಗಳು, ಅನುದಾನ ಹಂಚಿಕೆ, ಮೂಲಸೌಕರ್ಯ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ದೃಷ್ಟಿಯಿಂದ ಈ ನಿಲುವು ಜನಪರವಾಗಿದೆ. ಈ ದಿಟ್ಟ ಅಭಿಪ್ರಾಯಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಹಾಳಿದ್ದಾರೆ.
ಹುಬ್ಬಳ್ಳಿ-ಧಾರವಾಡವನ್ನು ಮರು ಏಕೀಕರಿಸಿ ಬೃಹತ್ ಮಹಾನಗರ ಪಾಲಿಕೆಯಾಗಿಸುವ ಮೂಲಕ ರಾಜ್ಯದ ಎರಡನೇ ರಾಜಧಾನಿ ಸಮಾನ ಸ್ಥಾನಮಾನವನ್ನು ನೀಡುವ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.



























