Home ಜಿಲ್ಲೆ ಬೀದರ್ ನ್ಯಾಶನಲ್ ಸ್ಕೂಲ್ ಗೆ ಮೇಜರ್ ಚಂದನ್ ಗೌತಮ ಭೇಟಿ: ಸಂವಾದ

ಬೀದರ್ ನ್ಯಾಶನಲ್ ಸ್ಕೂಲ್ ಗೆ ಮೇಜರ್ ಚಂದನ್ ಗೌತಮ ಭೇಟಿ: ಸಂವಾದ

ಬೀದರ್: ಫೆ.16:ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಸ್ಕೂಲ್ (ಸೈನಿಕ್ ಸ್ಕೂಲ್ ಬೀದರ್) ನಲ್ಲಿ ಇಂದು ವಿಶೇಷ ಪ್ರೇರಣಾದಾಯಕ ಕಾರ್ಯಕ್ರಮ ನಡೆಯಿತು. ಬೆಳಗಾವಿ ಎ.ಆರ್.ಓ ಮೇಜರ್ ಚಂದನ್ ಗೌತಮ್ ಅವರು ಶಾಲೆಗೆ ಭೇಟಿ ನೀಡಿ ಕ್ಯಾಡೆಟ್‍ಗಳೊಂದಿಗೆ ಸಂವಾದ ನಡೆಸಿದರು.
ಭಾರತೀಯ ಸೇನೆಯಲ್ಲಿ ತಮ್ಮ ಸೇವಾ ಅನುಭವಗಳು ಹಾಗೂ ಕಾರ್ಯಕ್ಷೇತ್ರದ ನೆನಪುಗಳನ್ನು ಹಂಚಿಕೊಂಡ ಅವರು ಶಿಸ್ತು, ಧೈರ್ಯ ಮತ್ತು ದೇಶಭಕ್ತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ಅಗತ್ಯವಾದ ಸಿದ್ಧತೆ, ಸಂಕಲ್ಪ ಮತ್ತು ಸಮರ್ಪಣೆಯ ಕುರಿತು ಮಾರ್ಗದರ್ಶನ ನೀಡಿದರು.
ಮೇಜರ್ ಅವರ ಪ್ರೇರಣಾದಾಯಕ ಭಾಷಣದಿಂದ ಕ್ಯಾಡೆಟ್‍ಗಳು ಅತ್ಯಂತ ಉತ್ಸಾಹಿತರಾಗಿ, ಭವಿಷ್ಯದಲ್ಲಿ ದೇಶಸೇವೆಗೆ ತೊಡಗುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಈ ಸಂವಾದವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವ ಬೀರಿದ್ದು, ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಅವರಿಗೆ ಸ್ಪೂರ್ತಿ ನೀಡಿದೆ.