ಶ್ರದ್ಧೆ, ಪ್ರಾಮಾಣಿಕತೆÀ, ಆತ್ಮವಿಶ್ವಾಸವೆಂಬುದನ್ನು ಪಾಲಿಸಿ:ಶಿವಲೀಲಾ

ತಾಳಿಕೋಟೆ:ಅ.೧೯: ದೀಪದಾನವೆಂದರೆ ದೀಪವನ್ನು ಗೌರವದಿಂದ ಕಾಣುತ್ತೇವೆ ದೀಪ ಜ್ಞಾನದ ಬೆಳಕು ಎಂಬುದನ್ನು ಗುರುಗಳು ನೀಡುತ್ತಾರೆ ಅಂತಹದನ್ನು ಪಡೆದುಕೊಂಡ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದಾರೆ ಎರೆಯುತ್ತಾರೆ ಅದಕ್ಕೆ ದೀಪದಾನ ಸಮಾರಂಭವೆAದು ಹೇಳಲಾಗುತ್ತದೆ ಎಂದು ಸ್ಥಳೀಯ ಜಾನಪದ ಸಾಹಿತಿಗಳು ಹಾಗೂ ಸಹ ಶಿಕ್ಷಕರಾದ ಶ್ರೀಮತಿ ಶಿವಲೀಲಾ ಎಂ ಮುರಾಳ ಅವರು ನುಡಿದರು.
ಶನಿವಾರರಂದು ಸ್ಥಳೀಯ ವೀ.ವಿ.ಸಂಘದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಬಿಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಕುರಿತು ಏರ್ಪಡಿಸಲಾದ ದೀಪದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಒಂದು ಹಣತೆಯಿಂದ ಸಾವಿರಾರು ಹಣತೆಗಳು ಬೆಳಕು ನೀಡುತ್ತವೆ ಹಾಗೆ ನೀವು ಕೂಡಾ ಬೆಳಕು ನೀಡುವ ಕಾರ್ಯ ಮಾಡಿರಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದ ಶಿಕ್ಷಕಿ ಶಿವಲೀಲಾ ಅವರು ಶಾರದಾ ದೇವಿಯನ್ನು ಬೇಡಿ ಕೊಳ್ಳುತ್ತಾ ಅಜ್ಞಾನ ಅಂದಾಕಾರ ಹೋಗಲಾಡಲಿ ಎಂದು ಬೇಡಿಕೊಳ್ಳಲಾಗುತ್ತದೆ ಎಂದು ೩ ಅಂಶಗಳ ಕುರಿತು ತಿಳಿ ಹೇಳಿದ ಅವರು ಸಿಸ್ತು ಮತ್ತು ಶ್ರದ್ದೆಯಿಂದ ಓದುವ ಕಾರ್ಯ ಮಾಡಿರಿ ಪ್ರಾಮಾಣಿಕ ತನದಿಂದ ಪ್ರಯತ್ನ ಮಾಡುತ್ತಾ ಆತ್ಮ ವಿಸ್ವಾಸವನ್ನು ಗಳಿಸಿಕೊಳ್ಳಿರಿ ಎಂದರು. ಓದುವಿನಲ್ಲಿ ಶ್ರದ್ದೆ ಎಂಬುದಿರಲಿ ಎಂಬುದನ್ನು ಪ್ರಸ್ಥಾಪಿಸಿದ ಶಿಕ್ಷಕಿ ಶಿವಲೀಲಾ ಅವರು ಸಿಸ್ತು ಮತ್ತು ಶ್ರದ್ದೆ ಎಂಬುದರೊAದಿಗೆ ತಮ್ಮ ಉದ್ಯೋಗವನ್ನು ಸೃಷ್ಠಿಸಿಕೊಂಡAತಹ ವಿಜಯ ಶಂಕೇಶ್ವರ ಅವರ ಸಾದನೆ ಕುರಿತು ಹಾಗೂ ಸುಧಾಮೂರ್ತಿ ಅವರು ಸಾಧನೆ ಮಾಡಿದಲ್ಲದೇ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆಂಬುದನ್ನು ಪ್ರಶಿಕ್ಷಣಾರ್ಥಿಗಳಿಗೆ ಮನವರಿಕೆ ಮಾಡಿದರು. ಮಕ್ಕಳು ಓದಿ ಬರೆದು ವಿದ್ಯಾ ವಂತರಾಗಲಿ ಎಂಬ ಉದ್ದೇಶಹೊತ್ತ ಮಾತಾಪಿತರನ್ನು ಎಂದು ಮರೆಯದೇ ಗೌರವದಿಂದ ಕಾಣಿರಿ ಎಂದು ಚಿಕ್ಕ ಕಥೆಯೊಂದನ್ನು ಹೇಳಿ ತಂದೆ ತಾಯಿಯ ಪ್ರೀತಿ ಹೇಗಿರುತ್ತದೆ ಎಂಬುದನ್ನು ಪ್ರಶಿಕ್ಷಣಾರ್ಥಿಗಳಿಗೆ ಮನವರಿಕೆ ಮಾಡಿದರು. ಮಕ್ಕಳ ಬಧುಕೇ ಮುಖ್ಯವೆಂಬುದನ್ನು ತಂದೆ ತಾಯಿಯವರು ಅರ್ಥೈಸಿಕೊಂಡಿರುತ್ತಾರೆ ಮಾನವೀಯ ಮೌಲ್ಯಗಳೆಂಬವುಗಳು ಜಾನಪದ ಸಾಹಿತ್ಯದಲ್ಲಿ ದೊರೆಯುತ್ತವೆ ಓದು ಎಂಬುದು ಬರೇ ಓದುವದಲ್ಲಾ ಅದರಲ್ಲಿದ್ದ ವಿಷಯ ಅರ್ಥೈಸಿಕೊಳ್ಳಬೇಕೆಂದು ಹೇಳಿದ ಅವರು ನಡೆ ನುಡಿ ಎರಡು ಒಂದಾಗಬೇಕೆAಬ ಭಾವನೆ ಎಂಬುದು ಬಸವಾದಿ ಶರಣರದ್ದಾಗಿದೆ ಎಲ್ಲ ಗುರುಗಳ ಹಾಗೂ ಮಹಾ ವಿದ್ಯಾಲಯದ ಸಂಬAದಿತ ಆಡಳಿತ ಮಂಡಳಿಯವರ ಶ್ರಮವೆಂಬುದು ಈ ಶ್ರೀ ಖಾಸ್ಗತೇಶ್ವರ ಎಂಬ ಸಂಸ್ಥೆಯಲ್ಲಿ ಅಡಗಿದ್ದರಿಂದಲೇ ಸಂಸ್ಥೆಯ ಹೆಸರು ಎಲ್ಲಡೆಯಲ್ಲಿಯೂ ಹಬ್ಬಿ ಅದರ ಘನತೆ ಗೌರವವೆಂಬುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಇನ್ನೋರ್ವ ವೀ.ವಿ.ಸಂಘದ ನಿರ್ದೇಶಕರಾದ ಸಿ.ಆರ್.ಕತ್ತಿ ಅವರು ಮಾತನಾಡಿ ಎಲ್ಲ ವೃತ್ತಿಗಳಲ್ಲಿ ಶಿಕ್ಷಣ ವೃತ್ತಿ ಮಹತ್ವದ್ದಾಗಿದೆ ಇಲ್ಲಿ ಕಲೆತಂತ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದಿದ್ದಾರೆ ಶಿಕ್ಷಣದ ವ್ಯವಸ್ಥೆ ಚೆನ್ನಾಗಿದ್ದರೆ ದೇಶವೆಂಬುದು ಪ್ರಗತಿ ಪಥದತ್ತ ಸಾಗಲು ಕಾರಣವಾಗಲಿದೆ ಎಂದ ಅವರು ನೂತನವಾಗಿ ಪ್ರಶಿಕ್ಷಣಾರ್ಥಿಗಳು ಶಿಕ್ಷಕ ವೃತ್ತಿಯನ್ನು ಅನುಸರಿಸಲು ಮುಂದಾಗುತ್ತಿರಿ ಕಾರಣ ನೀವು ಮಾಡುವಂತಹ ಸೇವಾ ಕಾರ್ಯ ಪ್ರಾಮಾಣಿಕತನದ್ದಾಗಲಿ ಕಷ್ಟಪಡುವದಕ್ಕಿಂತ ಇಷ್ಟಪಟ್ಟು ಓದುವ ಕಾರ್ಯ ನಿಮ್ಮದಾಗಲಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ.ಆರ್.ಎಂ.ಭAಟನೂರ ಅವರು ಮಾತನಾಡಿ ನಂಬಿಕೆ ಎಂಬುದು ಯಶಸ್ವಿನ ಪಾತ್ರ ವಹಿಸುತ್ತದೆ ಆತ್ಮ ವಿಸ್ವಾಸವೆಂಬುದು ನಮ್ಮಲ್ಲಿರಬೇಕು ಪ್ರತಿಯೊಬ್ಬರಿಗೂ ನಿರಿಕ್ಷೆ ಎಂಬುದು ಅಗತ್ಯವಾಗಿದೆ ಅದರ ಜೊತೆಗೆ ಆತ್ಮ ವಿಸ್ವಾಸವೆಂಬುದು ಅಗತ್ಯವಾಗಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿ ಹೇಳಿ ಭವ್ಯ ಭಾರತದ ೮ನೇ ಗ್ರೂಫ್ ತಮ್ಮದಾಗಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸನ್ಮಾನ ಸ್ವಿಕರಿಸಿ ಮಾತನಾಡಿ ಕೂಡುವದು ಸಹಜವಾಗಿದೆ ಅಗಲುವದು ಅನಿವಾರ್ಯ ದೀಪದಂತೆ ಪಡೆದಂತಹ ಬೆಳಕು ನೀಡುವ ಶಿಕ್ಷಣ ನೀವೆಲ್ಲರೂ ದೀಪ ಹಚ್ಚುವಂತೆ ಹಣತೆಯನ್ನು ಹಚ್ಚುವ ಕಾರ್ಯಕ್ಕೆ ವಿದ್ಯಾರ್ಥಿಗಳಾದವರು ಮುಂದಾಗಿದ್ದಿರಿ ಅಂತಹ ಶಿಕ್ಷಕ ವೃತ್ತಿಯನ್ನು ಅನುಸರಿಸುತ್ತಿದ್ದಿರಿ ಅದಕ್ಕೆ ಎಂದೂ ದ್ರೋಹ ಬಗೆಯಬಾರದೆಂದರು. ವಿದ್ಯಾರ್ಥಿಗಳನ್ನು ಪರಿವರ್ತನೆ ಮಾಡುವ ಕಾರ್ಯ ಶಿಕ್ಷಕರದ್ದಾಗಿದೆ ಶಿಕ್ಷಣವೆಂಬುದನ್ನು ಪರಿವರ್ತನೆ ಮಾಡಿಕೊಂಡು ಮಕ್ಕಳನ್ನು ತಯಾರಿಸುವ ಕಾರ್ಯ ಶಿಕ್ಷಕರಲ್ಲಿದೆ ಎಂದು ಕೆಲವು ಉದಾಹರಣೆಗಳನ್ನು ನೀಡಿದ ಶ್ರೀಗಳು ಶಿಕ್ಷಕ ಎಂಬ ವೃತ್ತಿಗೆ ಪ್ರಾಮಾಣಿಕತನವೆಂಬುದು ಬೇಕು ಓದಿನಲ್ಲಿ ಪ್ರಾಮಾಣಿಕತನವೆಂಬುದು ಇರಲಿ ಮಾತಾಪಿತರನ್ನು ಗೌರವಿಸುವ ಕಾರ್ಯ ಮಾಡಿರಿ ನಿಂತಲ್ಲಿ ಕುಂತಲ್ಲಿ ಪಾಠ ಮಾಡುವಂತಹ ಹವ್ಯಾಸ ಬೆಳಸಿಕೊಂಡು ಮುಂದಾಗಿರಿ ಎಂದು ಶ್ರೀಗಳು ಚಿಕ್ಕ ಕಥೆಯೊಂದನ್ನು ಹೇಳಿ ಆಯ್‌ಎಎಸ್ ಪರಿಕ್ಷೆ ಪಾಸ್ ಆದ ಬಡ ವಿದ್ಯಾರ್ಥಿ ಸಾಧನೆ ಮಾಡಿ ತೋರಿಸಿದ್ದರ ಕುರಿತು ವಿವರಿಸಿದ ಅವರು ಆತ್ಮ ವಿಸ್ವಾಸ ಪ್ರಾಮಾಣಿಕತನ ದಕ್ಷತೆ ಎಂಬುದು ನಿಮ್ಮಲ್ಲಿದ್ದರೆ ನಿಮ್ಮ ಜೀವನ ಸಾರ್ಥಕವಾಗಲಿದೆ ಎಂದರು.
ಇದೇ ಸಮಯದಲ್ಲಿ ಪ್ರಥಮ ವರ್ಷದ, ದ್ವಿತೀಯ ವರ್ಷದ ಪುರುಷ ಹಾಗೂ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಮಹಾ ವಿದ್ಯಾಲಯದ ವತಿಯಿಂದ ಗೌರವಿಸಲಾಯಿತು.
ವಿವಿಧ ಕ್ರೀಡೆಗಳಲ್ಲಿ ಸಾಧನೆ ತೊರಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ಪತ್ರ ಭಹುಮಾನ ನೀಡಿ ಗೌರವಿಸಲಾಯಿತು. ಇದೇ ಸಮಯದಲ್ಲಿ ಮಹಾ ವಿದ್ಯಾಲಯದ ಉಪನ್ಯಾಸಕರುಗಳಿಗೆ, ಪ್ರಶಿಕ್ಷಣಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಎಸ್.ಕೆ.ಶಿಕ್ಷಣ ಮಹಾ ವಿದ್ಯಾಲಯದ ಚೇರಮನ್‌ರು ಹಾಗೂ ವೀ.ವಿ.ಸಂಘದ ಸಹ ಕಾರ್ಯದರ್ಶಿಯಾದ ಕಾಶಿನಾಥ ಮುರಾಳ, ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಅಶೋಕ ಜಾಲವಾದಿ, ಬಾಲಕರ ಪ್ರೌಢ ಶಾಲೆಯ ಅಧ್ಯಕ್ಷ ಮಹಾಂತೇಶ ಕತ್ತಿ, ಪ್ರಭು ಬಿಳೇಭಾವಿ, ದ್ಯಾಮನಗೌಡ ಪಾಟೀಲ, ಎಸ್.ಕೆ.ಮಹಾ ವಿದ್ಯಾಲಯದ ಪ್ರಾಚಾರ್ಯ ದಯಾನಂದ ಮೂಗಡ್ಲಿಮಠ, ಡಾ.ಅನೀಲ ಇರಾಜ, ಒಕ್ಕೂಟದ ಕಾರ್ಯದರ್ಶಿ ವೀರೇಶ ಹುನಗುಂದ, ಕುಮಾರಿ ಭಾಗ್ಯಶ್ರೀ ಕಡಕಲ್ಲ, ಮೊದಲಾದವರು ಉಪಸ್ಥಿತರಿದ್ದರು.
ಎಸ್.ಪಿ.ಬಡಿಗೇರ ನಿರೂಪಿಸಿದರು. ಯು.ಎನ್.ಮಂಗೋಡ ಸ್ವಾಗತಿಸಿದರು. ಎಂ.ಎ.ಪೊದ್ದಾರ ವಂದಿಸಿದರು.