ಶಾಲಾ ಕಾಲೇಜು ವಸತಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಿಗ್ರಾಮಗಳಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಿ :ಇಓ ದೀಪಿಕಾ ಬಿ ನಾಯ್ಕರ

ಹುಮನಾಬಾದ : ಜೂ.೨೯:ಗ್ರಾಮಗಳಲ್ಲಿ ಪೂರೈಸುವ ಕುಡಿಯುವ ನೀರಿನ ಫೈಫ್ ಒಡೆದು, ನೀರು ಸೋರಿಕೆಯಾಗಿ ಕಲುಷಿತ ನೀರು, ಕುಡಿಯುವ ನೀರಿನ ಫೈಪ್ ಮೂಲಕ ಜನರ ಮನೆಗಳಗೆ ಪೊರೈಕೆಯಾಗದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃಧಿ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳು ಸ್ವಚ್ಛತೆ ಕಾಪಾಡಿಕೊಂಡು ಹೋಗಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ ತಿಳಿಸಿದ್ದರು.
ಶುಕ್ರವಾರ ತಾಲ್ಲೂಕು ಪಂಚಾಯತ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು,
ಮಳೆಗಾಲ ಇರುವ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ರಸ್ತೆಯ ಮೇಲೆ , ತೆಗ್ಗು ಗುಂಡಿಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೋಳ್ಳಬೇಕು.ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಕ್ಕಳಿಗೆ,ಗರ್ಭಿಣಿ ಮಹಿಳೆಯರಿಗೆ ಹಾಗೂ ಗ್ರಾಮದ ಸಾರ್ವಜನಿಕರಿಗೆ ಕಚ್ಚುವುದರಿಂದ ಡೆಂಘೆ,ಟೈಫಾಡ್ ,ಮಲೇರಿಯಾ ಇತ್ಯಾದಿ ಕಾಯಿಲೆಗಳು ಬರುವುದನ್ನು ತಡೆಯಲು ಗ್ರಾಮದಲ್ಲಿ ಸ್ವಚ್ಚೆತೆ ಕಾಪಾಡಲು ಹೆಚ್ಚು ಆದ್ಯತೆ ನೀಡಬೇಕೆಂದು ಸೂಚಿಸಿದ್ದರು.
ಗ್ರಾಮದಲ್ಲಿ ಇರುವ ಎಲ್ಲಾ ನೀರು ಶೇಖರಣಾ ಮಾಡವ ಟ್ಯಾಂಕ್ ಗಳು ಮತ್ತು ಬಡವನಗಳಲ್ಲಿರುವ ಮಿನಿ ಟ್ಯಾಂಕ್ ಗಳು ತಿಂಗಳಿಗೆ ಎರಡು ಮೂರು ಭಾರಿ ಸ್ವಚ್ಛತೆಗೊಳಿಸುವುದರ ಜೊತೆಗೆ ತೆರೆದ ಬಾವಿಗಳಲ್ಲಿ ಬ್ಲಿಚಿಂಗ್ ಪೌಡರ್ ಹಾಕಿ ನಿಯಮಾನುಸಾರ ಅಗತ್ಯ ಕ್ರಮವಹಿಸುವಂತೆ ತಿಳಿಸಿದ್ದರು.
ಗ್ರಾಮ ನೀರು ಮತ್ತು ನೈರ್ಮಲ್ಯ (ವಿಡಬ್ಲ್ಯೂಎಸ್ ಸಿ) ಎಂಬ ಸಮಿತಿಯನ್ನು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಾಡಿ, ವಿಶೇಷ ಅಭಿಯಾನದಲ್ಲಿ ಜಲ್ ಜೀವನ್ ಮಿಷನ್ ( ಜೆಜೆಎಮ್) ಯೋಜನೆಯಡಿ ಐಎಸ್ ಎ, ಎಸ್ ಆರ್ ಎ ಅಂಡ್ ಆರ್ ಡ ಬ್ಲ್ಯೂಎಸ್, ಎಲ್‌ಎಬಿ ಸಿಬ್ಬಂದಿಗಳು ತಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ.ನೀರಿನ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಹಾಗೂ ಸಾರ್ವಜನಿಕರು ಉಪಯೋಗಿಸುವಂತಹ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ ಸೂಕ್ತವಾದ ನೀರನ್ನು ಉಪಯೋಗಿಸುವಂತೆ ಜನರಿಗೆ ಈ ಒಂದು ಅಭಿಯಾನ ಮೂಲಕ ತಿಳಿಸಬೇಕು ಎಂದು ಸಲಹೆ ನೀಡಿದರು.