
ಯಾದಗಿರಿ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ೧೩೮ನೇ ಸಂಚಿಕೆಯ ನೇರ ಪ್ರಸಾರವನ್ನು ನಗರದ ವಾರ್ಡ್ ಸಂಖ್ಯೆ ೨೩ರಲ್ಲಿ ಹಿರಿಯರಾದ ನೀಲಕಂಠ ಶೀಲವಂತ ಅವರ ನಿವಾಸದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೀಕ್ಷಿಸಿದರು.
ಈ ಸಂದರ್ಭದಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನಗಣತಿಯಲ್ಲಿ ಪ್ರತಿಯೊಬ್ಬ ನಾಗರಿಕರ ಭಾಗವಹಿಸುವಿಕೆಯ ಮಹತ್ವದ ಕುರಿತು ಮಾತನಾಡಿದರು. ದೇಶದ ಭವಿಷ್ಯದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನಿಖರವಾದ ಮಾಹಿತಿಯ ಅಗತ್ಯತೆಯನ್ನು ಅವರು ವಿವರಿಸಿದರು.
ಇದೇ ವೇಳೆ ದೇಶದ ಭದ್ರತೆ ಹಾಗೂ ಸೈನಿಕರ ಶೌರ್ಯವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ೨೦೧೬ರ ಸರ್ಜಿಕಲ್ ಸ್ಟ್ರೈಕ್ಗೆ ಹತ್ತು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ಗಡಿಯನ್ನು ಕಾಯುತ್ತಿರುವ ವೀರ ಸೈನಿಕರ ತ್ಯಾಗ ಮತ್ತು ಸೇವೆಯನ್ನು ಗೌರವಿಸುವಂತೆ ಕರೆ ನೀಡಿದರು.
ಅಲ್ಲದೆ, ಶ್ರೀ ಅಶೋಕ್ ಸಿಂಘಲ್ ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅವರ ಸಮಾಜ ಹಾಗೂ ರಾಷ್ಟ್ರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಪ್ರಧಾನ ಕಾರ್ಯದರ್ಶಿಗಳಾದ ರಮೇಶ ದೊಡ್ಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ರಾಜಶೇಖರಯ್ಯ ಸ್ವಾಮಿ, ಶರಣಗೌಡ ಅಲ್ಲಿಪುರ, ಗೌರೀಶ ಭಾಡದ್, ಶಿವಣ್ಣ ಬಡಿಗೇರ, ಶ್ರೀನಾಥ ಜೈನ್, ಶಿವರಾಜ ಅರುಣಿ, ಲಕ್ಷ್ಮೀಪುತ್ರ ಮಾಲಿ ಪಾಟೀಲ, ವಿಜಯಲಕ್ಷ್ಮಿ, ಭೀಮಾಬಾಯಿ ಸೆಂಡಗಿ, ಶಕುಂತಲಾ, ಸಿದ್ದು ಸಾಹುಕಾರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


























