
ಹುಮನಾಬಾದ್ : ನ.25:ಶ್ರೀ ಮಹಾತ್ಮ ಬೊಮ್ಮಗೊಂಡೇಶ್ವರ ರವರು ನಮ್ಮ ಜಿಲ್ಲೆಯಲ್ಲಿ ಜನ್ಮವನ್ನು ತಾಳಿರುವುದು ಅತಿ ಹೆಮ್ಮೆಯ ವಿಷಯ, ಅವರು ತೋರಿರುವ ತತ್ವ, ಆದರ್ಶಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ಸಲಹೆ ನೀಡಿದರು.
ತಾಲ್ಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ನಡೆದ ಮಹಾತ್ಮ ಶ್ರೀ ಮದನಹಳ್ಳಿ ಗ್ರಾಮದ ಬೊಮ್ಮಗೊಂಡೇಶ್ವರ ಮೂರ್ತಿ ಉದ್ಘಾಟನೆಯ ನೇರವೆರಿಸಿ ಅವರು ಮಾತನಾಡಿದರು.
ತಾಲೂಕಿನ ಚಂದನಹಳ್ಳಿ ಗ್ರಾಮದ ಮಹಾತ್ಮ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಹಾಲುಮತ, ಕುರುಬ, ಗೊಂಡ ಸಮಾಜದ ವತಿಯಿಂದ ಸೋಮವಾರ ನಡೆದ ಮಹಾತ್ಮ ಬೊಮ್ಮಗೊಂಡೆಶ್ವರರ ನೂತನ ಮೂರ್ತಿ ಅನಾವರಣ ಕಾರ್ಯಕ್ರಮ
ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ
ಕನಕದಾಸರು, ಸಂಗೊಳ್ಳಿ ರಾಯಣ್ಣನವರಂತ ಮಹಾನ್ ಪುರುಷರು ಜನಿಸಿದ ಕುರುಬ ಸಮಾಜದ ಒಂದು ಸಮಾನ್ಯ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಎಲ್ಲ ವರ್ಗದ ಬಡಜನರ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕೊಂಡಾಡಿದರು.
ಸಮಾಜದ ಪರಿವರ್ತನೆಗೆ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಸೇರಿದಂತೆ ಕನಕದಾಸರು ಹಾಗೂ ಬೊಮ್ಮಗೊಂಡೇಶ್ವರರ ತತ್ವಗಳನ್ನು ಇಂದಿನ ಯುವ ಪೀಳಿಗೆಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾಗರಿಕ ಸಮಾಜದಲ್ಲಿ ಉತ್ತಮರಾಗಿ ಜೀವನ ನಡೆಸಬೇಕು ಎಂದರು.
ಚಂದನಹಳ್ಳಿ ಗ್ರಾಮದಲ್ಲಿ ಬೊಮ್ಮಗೊಂಡೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆಗೆ ಸಂಪೂರ್ಣ ಸಹಕಾರ ನೀಡಿದ ಶಿವಕುಮಾರ ಮೇತ್ರೆಗೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಹಾಗೂ ವಿಧಾನ ಪರಿಷತ್ ಶಾಸಕ ಡಾ. ಚಂದ್ರಶೇಖರ ಪಾಟೀಲ್ ವಿಶೇಷವಾಗಿ ಸನ್ಮಾನಿಸಿ, ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಕನಕಗುರು ಪೀಠದ ಚಿಕ್ಕಬೀರಲಿಂಗ ದೇವರು, ಉಚ್ಚಾ ಆಶ್ರಮದ ಗೋಪಾಲ ಮುತ್ಯಾ, ವಿಧಾನ ಪರಿಷತ್ ಶಾಸಕ ಡಾ. ಚಂದ್ರಶೇಖರ ಪಾಟೀಲ್, ಗ್ರಾಪಂ. ಅಧ್ಯಕ್ಷೆ ತೇಜಮ್ಮ ಹೈಬತ್ತಿ, ಶಿವಕುಮಾರ ಮೇತ್ರೆ, ಗ್ರಾಪಂ. ಉಪಾಧ್ಯಕ್ಷ ವಿಠಲ ನಿಂಗಗೊಂಡ, ಮಲ್ಲಿಕಾರ್ಜುನ್ ಮಾಳಶಟ್ಟಿ, ಉಮೇಶ ಜಮಗಿ, ಪದ್ಮಾಕರ ಪಾಟೀಲ್, ಸಂಬಾಜಿ ಪಾಟೀಲ್, ಪ್ರಕಾಶ ಪಾಟೀಲ್, ಸತೀಷ ರಾಂಪೂರೆ, ಅಶೋಕ ಚಳಕಾಪೂರೆ, ಅನಿಲ್ ಕಬೀರಾಬಾದೆ, ಶ್ರೀನಿವಾಸ ಮೇತ್ರೆ, ಚಂದ್ರಕಾಂತ ಸ್ವಾಮಿ, ಪವನಗೊಂಡ, ಸೂರ್ಯಕಾಂತ ಪಾಟೀಲ್, ಕೆ.ಡಿ. ಗಣೇಶ, ಸಂಜೀವಕುಮಾರ ವಡ್ಡನಕೇರಾ, ಅಶೋಕಕುಮಾರ ಚಳಕಾಪೂರೆ, ಸಚೀನ ಕಲ್ಲೂರ,ಶಿವರಾಜ ಚಿನಕೇರಿ, ಬಾಬುರಾವ ಮಲ್ಕಪುರೆ, ಶಿವರಾಜ ಮೆತ್ರಿ, ವಿನಾಯಕ ಮಂಕೋಜ್ಜಿ, ಪದ್ಮಕರ ಪಾಟೀಲ, ಅಭಿನುಯ ನಿರಗುಡಿ, ಪವನ್ ಗುಂಡ , ರಾಜಕುಮರ ಮೆತ್ರಿ ಬಾಲಾಜಿ ಕರನಾಗೆ ಸೇರಿದಂತೆ ಅನೇಕರು ಇದ್ದರು.

























