Home ಜಿಲ್ಲೆ ಪುರಾತನ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾಗರಣೆ

ಪುರಾತನ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾಗರಣೆ

ಸುರಪುರ:ಫೆ.೧೫: ರಂಗಪೇಟೆಯ ಹನುಮಾನ ದೇವಸ್ಥಾನದ ಪಕ್ಕದಲ್ಲಿನ ಐತಿಹಾಸಿಕ ಪುರಾತನ ಶ್ರೀ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾಗರಣೆ ಅಂಗವಾಗಿ ವಿರಾಟ ಹಿಂದೂ ಧರ್ಮ ಜಾಗೃತಿ ಸಮಿತಿಯ ಮುಖಂಡರು ಸಭೆ ನಡೆಸಿ ಕಾರ್ಯಕ್ರಮದ ವಿವರಣೆ ನೀಡಿದರು.
ಸಮಿತಿ ಮುಖಂಡ ಮೌನೇಶ ನಾಲವಾರ ಮಾತನಾಡಿ,ಕಳೆದ ಅನೇಕ ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ರಂಗAಪೇಟೆಯ ಹನುಮನ ದೇವಸ್ಥಾನದ ಪಕ್ಕದಲ್ಲಿನ ಪುರಾತನ ಶ್ರೀ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮವನ್ನು ಭಾನುವಾರ ರಾತ್ರಿ ಹಮ್ಮಿಕೊಳ್ಳಲಾಗಿದೆ.ನೂರಾರು ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯ ನಿರ್ಲಕ್ಷದಿಂದ ಸಿಥಿಲಗೊಂಡಿತು ಅದನ್ನು ಈಗ ಜೀರ್ಣೋದ್ಧಾರಗೊಳಿಸಲಾಗುತ್ತಿದ್ದು ಭಾನುವಾರ ನಡೆಯುವ ಕಾರ್ಯಕ್ರಮವನ್ನು ಸುರಪುರ ಅರಸು ವಂಶಸ್ಥ ರಾಜಾ ಕೃಷ್ಣಪ್ಪ ನಾಯಕ ಉದ್ಘಾಟಿಸಲಿದ್ದಾರೆ. ಭಾನುವಾರ ಬೆಳಗ್ಗೆ ನಗರೇಶ್ವರ ದೇವಸ್ಥಾನದಿಂದ ಈಶ್ವರ ಲಿಂಗವನ್ನು ಬಾಜಾ ಭಜಂತ್ರಿ ಯೊಂದಿಗೆ ದೇವಸ್ಥಾನದವರೆಗೆ ಮೆರವಣಿಗೆಯ ಮೂಲಕ ತರಲಾಗುವುದು, ನಂತರ ಈಶ್ವರ ಲಿಂಗದ ಪೂಜೆ ಹಾಗೂ ಸಂಜೆ ಜಾಗರಣೆ ಕಾರ್ಯಕ್ರಮ ಉದ್ಘಾಟನೆ ಪ್ರವಚನ ಪ್ರಾರಂಭೋತ್ಸವ ನಡೆಯಲಿದ್ದು ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಹಿಂದು ಯುವಕರಿಂದ ಭಜನಾ ಕಾರ್ಯಕ್ರಮ, ಫೆಬ್ರವರಿ ೧೬ರ ಸೋಮವಾರ ಬೆಳಗ್ಗೆ ಪ್ರಸಾದ ವಿತರಣೆ ಕಾರ್ಯಕ್ರಮವು ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ದಿವ್ಯ ಉಪಸ್ಥಿತಿಯನ್ನು ರಾಜ ಪುರೋಹಿತ ಕೇದಾರನಾಥ ಶಾಸ್ತ್ರಿಗಳು ವಹಿಸಲಿದ್ದು,ಪ್ರವಚನಕಾರರಾಗಿ ಸಂಸ್ಕೃತ ಪಂಡಿತರಾದ ಜನಾರ್ಧನ ಪಾಣಿಭಾತೆ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ. ಎಲ್ಲ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಮುಖಂಡರಾದ ವಿನೋದ ಆವಂಟಿ, ಬಸವರಾಜ ಚಂದನಕೇರಿ, ಮಲ್ಲಿಕಾರ್ಜುನ ಗುಡೂರ, ಅನಿಲ ಗೌಡ ಬಿರಾದರ್, ಜಗದೀಶ ಪಾಣಿಭಾತೆ, ಹರೀಶ್ ತ್ರಿವೇದಿ, ಮಂಜುನಾಥ, ಭೀಮರಾಯ ಭಜಂತ್ರಿ, ಪ್ರಸನ್ನ ಹೆಡಗಿನಾಳ, ಸಂತೋಷ ದೋತ್ರೆ, ಲಕ್ಷ್ಮಿಕಾಂತ ಶಿರವಾಳ, ಸ್ವಾಮಿ ವಿವೇಕಾನಂದ, ವೀರಭದ್ರ ಆರ್ ಕುಂಬಾರ, ಮಲ್ಲು ವಿಷ್ಣುಸೇನಾ, ವೆಂಕಟೇಶ ಅಮ್ಮಾಪುರಕರ್, ನಿಂಗಪ್ಪ ನಂಬಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.