
ಸಂಜೆ ವಾಣಿ ವಾರ್ತೆ
ಕಮಲನಗರ: ಅ.೮:ಸಮಾಜದ ಜನ ಮಹರ್ಷಿ ವಾಲ್ಮೀಕಿ ಅವರು ತತ್ವ ಸಿದ್ಧಾಂತ ಮತ್ತು ಅವರ ಆದರ್ಶ ಮೌನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಶಿಕ್ಷಣ ಕಲಿಯಬೇಕು ಎಂದು ಪಿಡಿಒ ಮಾಧವ ಗಾಯಕವಾಡ ಅವರು ಸಲಹೆ ನೀಡಿದರು.
ತಾಲ್ಲೂಕಿನ ಹೋಳಸಮುದ್ರ ಗ್ರಾಮ ಪಂಚಾಯತ ಕಚೇರಿಯಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸು ಮಾತನಾಡಿದರು.
ಸಮಾಜದ ಜನ ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಸಮಗ್ರವಾಗಿ ಅಭಿವೃದ್ಧಿಯಾಗಲು ಸಾಧ್ಯ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಭಾರತದ ಸಂಸ್ಕೃತಿಯ ಪ್ರತಿಕವಾಗಿದೆ. ರಾಮಾಯಣ ಮಾನವೀಯ ಮೌಲ್ಯಗಳು ತುಂಬಿದೆ. ರಾಮಾಯಣ ದಂತಹ ಮಹಾಕಾವ್ಯ ರಚಿಸಿದ ವಾಲ್ಮೀಕಿ ಅವರ ಜೀವನ ಆದರ್ಶಗಳು ನಮ್ಮ ನಿಮ್ಮೆಲ್ಲರಿಗೆ ಸ್ಪೂರ್ತಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಬಾಳು ಭೂತಾಳೆ, ಮಾರುತಿ ಆಳಂದೆ, ಪಾಂಡುರAಗ ಜಾಧವ,ಕೇಶವ , ಪ್ರಕಾಶ ನುದನೂರೆ, ಸಂತೋಷ ಸೇರಿದಂತೆ ಇನ್ನಿತರದಿದ್ದರು.





























