
ಅಫಜಲಪುರ: ಪಟ್ಟಣದ ಶ್ರೀ ನಿಂಬೆಕ್ಕದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಮಹಾಪೂಜೆ ಹಾಗೂ ಮಹಾಭಿಷೇಕ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾಭಿಷೇಕ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಸತೀಶ ಪದಕಿ, ಸುಭಾಷ ಮನ್ಮಿ, ಲಕ್ಷ್ಮಿಕಾಂತ ಚಿಂಚೋಳಿ, ಸಮಾಜದ ಅಧ್ಯಕ್ಷರು ಹಾಗೂ ಟ್ರಸ್ಟ್ ಅಧ್ಯಕ್ಷರಾದ ಸಂತೋಷ ಮನ್ಮಿ, ಟ್ರಸ್ಟ್ ಸದಸ್ಯರಾದ ಸರ್ವೇಶ ಲಿಂಬಿತೋಟ, ಮಹಾಂತೇಶ ಸರಸಂಬಾ, ವಿಶ್ವನಾಥ ಮಲಘಾಣ, ಭೀಮಾಶಂಕರ ಕಲ್ಯಾಣಕರ, ಕಾಶೀನಾಥ ಹಂಜಗೆ ಸೇರಿದಂತೆ ಹಲವರು ಭಾಗವಹಿಸಿ ದೇವಿಯ ದರ್ಶನ ಪಡೆದರು.
ಶ್ರಾವಣ ಮಾಸದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು.





















