ಹೂ ಹಿಪ್ಪರಗಿ : ಸೆ.12:ಬಸವನ ಬಾಗೇವಾಡಿ ತಾಲ್ಲೂಕಿನ ಕಾಮನಕೇರಿ ಗ್ರಾಮದಲ್ಲಿ ಮುಖ್ಯ ರಸ್ತೆ ಮೇಲೆ ಚರಂಡಿ ಗಲೀಜು ನೀರು ಸಂಗ್ರಹವಾಗಿ ದುರ್ವಾಸನೆ ಹರಡುತ್ತಿದ್ದು, ಅವ್ಯವಸ್ಥೆ ತಾಣವಾಗಿ ಮಾರ್ಪಟ್ಟಿದೆ.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಪಕ್ಕದಲ್ಲೇ ತಿಪ್ಪೆಗುಂಡಿಗಳು, ಚರಂಡಿ ನೀರು ನಿಂತಿದ್ದು.ಮುಂದೆ ಹರಿಯದಂತ ಸ್ಥಿತಿ ಇದೆ. ರಸ್ತೆಗಿಂತ ಕೆಳಭಾಗದಲ್ಲಿ ಚರಂಡಿ ಇದ್ದು, ಚರಂಡಿ ನೀರು ಸರಾಗವಾಗಿ ಮುಂದೆ ಹರಿಯದೇ ಒಂದೆಡೆ ಸಂಗ್ರಹವಾಗಿ ನಿಲ್ಲುತ್ತಿದೆ. ಇದು ಸುಮಾರು ತಿಂಗಳಿಂದ ಈ ರೀತಿ ಸಮಸ್ಯೆ ಕಾಮನಕೇರಿ ಗ್ರಾಮದಲ್ಲಿ ಇದ್ದರೂ. ಯಾರೊಬ್ಬರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಭೀಮ್ ಆರ್ಮಿ ಸಂವಿಧಾನ ರಕ್ಷಕ ದಳ ರಾಜ್ಯ ಸಂಘಟನಾ ಸಂಚಾಲಕರಾದ ಮಹಾಂತೇಶ ಹಾದಿಮನಿ ಮತ್ತು ಅಲ್ಲಿನ ಸ್ಥಳೀಯರ ಬೇಸರ ವ್ಯಕ್ತಪಡಿಸಿದ್ದಾರೆ.
ಜೋರಾಗಿ ಮಳೆ ಬಂದಂಥ ಸಂದರ್ಭದಲ್ಲಿ ಚರಂಡಿಯ ಗಲೀಜು ನೀರು ಮನೆಗಳ ಮುಂದೆ ಬಂದು ನಿಲ್ಲುತ್ತದೆ. ಜನರು ಗಲೀಜು ನೀರಿನ ಮೇಲೆಯೇ ನಡೆದಾಡಬೇಕಾಗಿದೆ. ಸದ್ಯ ನಿಜವ್ವ ಹನಮಂತ ಸಾತಿಹಾಳ ರವರ ಮನೆಯ ಮುಂದೆ ನೀರು ನಿಂತುಕೊಂಡಿದ್ದು, ಮಳೆಯಾದ ಸಂರ್ಭದಲ್ಲಿ ಮನೆಯ ಒಳಗೆ ನೀರು ನುಗ್ಗುತ್ತವೆ.ಎಂದು ಆ ಮಹಿಳೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾಳೆ.ಈ ಗಲೀಜು ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು.ಮಲೇರಿಯಾ ಡೆಂಗೂ, ರೋಗ ಹರಡುವ ಸಾಧ್ಯತೆ ಇದೆ.
ಹಲವು ತಿಂಗಳಿಂದ ಗಲೀಜಿನಿಂದ ಕೂಡಿರುವ ಚರಂಡಿ ನೀರಿನ ಮಧ್ಯೆ ನಡೆದಾಡುವಂಥ ದುಸ್ಥಿತಿ ನಿರ್ವಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿ, ಮತ್ತು ತಾಲ್ಲೂಕ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರು ಸಮಸ್ಯೆ ಬಗೆಹರಿಸುವ ಕೆಲಸವಾಗಿಲ್ಲ. ಚರಂಡಿ ನೀರು ನಿಲ್ಲದಂತೆ ಮುಂದೆ ಸರಿಯಾಗಿ ಹರಿದು ಹೋಗಬೇಕು. ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಒಂದು ವೇಳೆ ಇದರ ಬಗ್ಗೆ ನಿರ್ಲಕ್ಸ್ಯ ವಹಿಸಿದಲ್ಲಿ ಸಂಬಂಧ ಪಟ್ಟ ಕಾರ್ಯಲಯಗಳ ಬಿಗ್ ಮುದ್ರೆ ಹಾಕಿ ಹೋರಾಟ ಮಾಡಲಾಗುವುದು ಎಂದು ಭೀಮ್ ಆರ್ಮಿ ಸಂವಿಧಾನ ರಕ್ಷಕ ದಳ ರಾಜ್ಯ ಸಂಘಟನಾ ಸಂಚಾಲಕರಾದ ಮಹಾಂತೇಶ ಹಾದಿಮನಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಎಸ್. ಎಸ್. ಕೆಂಪೇಗೌಡ್ರು, ಸ್ಥಳೀಯರಾದ ಗೊಲ್ಲಾಳಪ್ಪ ಹಾದಿಮನಿ,ಯಲ್ಲಪ್ಪ ದೊಡಮನಿ,ಮಲಕಪ್ಪ ದೊಡಮನಿ, ಚಂದ್ರಾಮ ನಾಯ್ಕ, ಭೀಮಣ್ಣ ನಾಯ್ಕ,ಲಕ್ಷ್ಮಣ್ಣ ಹಾದಿಮನಿ, ಭೀಮ್ ಆರ್ಮಿ ಸಂವಿಧಾನ ರಕ್ಷಕ ದಳ ಸಂಘಟನೆಯವರು ಒತ್ತಾಯಿಸಿದ್ದಾರೆ.























