Home ಜಿಲ್ಲೆ ಎರಡು ಕಳ್ಳತನ ಪ್ರಕರಣ ಭೇದಿಸಿದ ಮಹಾಲಿಂಗಪುರ ಪೊಲೀಸರು೬೨ ಗ್ರಾಂ ಚಿನ್ನಾಭರಣ, ೩೦ ಮೊಬೈಲ್ ಫೋನ್ ವಶ

ಎರಡು ಕಳ್ಳತನ ಪ್ರಕರಣ ಭೇದಿಸಿದ ಮಹಾಲಿಂಗಪುರ ಪೊಲೀಸರು೬೨ ಗ್ರಾಂ ಚಿನ್ನಾಭರಣ, ೩೦ ಮೊಬೈಲ್ ಫೋನ್ ವಶ

ಮಹಾಲಿಂಗಪುರ,ಜೂ.೩-ಮಹಾಲಿAಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, ಒಟ್ಟು ೬೨ ಗ್ರಾಂ ಚಿನ್ನಾಭರಣ ಹಾಗೂ ೩೦ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಗುನ್ನೆ ನಂ. ೬೨/೨೦೨೫ ಹಾಗೂ ೧೭/೨೦೨೬ ಪ್ರಕರಣಗಳಲ್ಲಿ ಕ್ರಮವಾಗಿ ೩೦ ಗ್ರಾಂ ಮತ್ತು ೩೨ ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಕಳುವಾಗಿದ್ದ ಕುರಿತು ದೂರು ದಾಖಲಾಗಿತ್ತು. ಪ್ರಕರಣಗಳ ತನಿಖೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ದಾರ್ಥ ಗೋಯಲ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ಜಗದೀಶ, ಪೊಲೀಸ್ ಉಪಾಧೀಕ್ಷಕ ರೋಷನ್ ಜಮೀರ್ ಹಾಗೂ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಆರ್.ಆರ್. ಪಾಟೀಲ ಅವರ ನಿರ್ದೇಶನದಲ್ಲಿ ಪಿಎಸ್‌ಐ ಶಾಂತಾ ಎನ್. ಹಳ್ಳಿ, ಪಿಎಸ್‌ಐ ಕಿರಣಕುಮಾರ ಸತ್ತಿಗೇರಿ ಹಾಗೂ ಸಿಬ್ಬಂದಿಗಳಾದ ವಿ.ಬಿ. ತೇಲಿ, ಬಿ.ಜಿ. ದೇಸಾಯಿ, ಎ.ಎಂ. ಜಮಖಂಡಿ, ಕೃಷ್ಣಾ ಲಮಾಣಿ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿತು.
ಗುನ್ನೆ ನಂ. ೬೨/೨೦೨೫ ಪ್ರಕರಣದಲ್ಲಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಸಲಗರ ವಸ್ತಿ ನಿವಾಸಿ ಗೋರಕನಾಥ ಚಂದ್ರಕಾAತ ಜಾಧವ ಎಂಬ ಆರೋಪಿಯನ್ನು ಬಂಧಿಸಿ, ಆತನಿಂದ ೩೦ ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹಂದಿಗುAದ ಗ್ರಾಮದ ಬಸವ್ವ ಸಿದ್ದಪ್ಪ ಭದ್ರಶೆಟ್ಟಿ ಎಂಬ ಆರೋಪಿತೆಯನ್ನು ಬಂಧಿಸಿ, ಆಕೆಯಿಂದ ೩೨ ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಇದರ ಜೊತೆಗೆ ಮಹಾಲಿಂಗಪುರ ಠಾಣೆಯ ವತಿಯಿಂದ ಸಿಇಐಆರ್ (ಅಇIಖ) ಪೋರ್ಟಲ್ ಮೂಲಕ ೨೦೨೬ರಲ್ಲಿ ಕಳೆದುಹೋಗಿದ್ದ ೩೦ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ.
ವಶಪಡಿಸಿಕೊಂಡ ೬೨ ಗ್ರಾಂ ಚಿನ್ನಾಭರಣಗಳ ಮೌಲ್ಯ ಸುಮಾರು ?೯.೧೫ ಲಕ್ಷವಾಗಿದ್ದು, ಮೊಬೈಲ್‌ಗಳ ಮೌಲ್ಯ ?೪.೧೯ ಲಕ್ಷವಾಗಿದೆ. ಒಟ್ಟು ?೧೩.೩೪ ಲಕ್ಷ ಮೌಲ್ಯದ ಆಸ್ತಿ ಮರುಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮೆಚ್ಚಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ದಾರ್ಥ ಗೋಯಲ್ ಅವರು ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.