Home ಜಿಲ್ಲೆ ಸಿದ್ಧಾರೂಢ ಮಠದಲ್ಲಿ ಮಹಾ ಶಿವರಾತ್ರಿ ನಾಳೆ

ಸಿದ್ಧಾರೂಢ ಮಠದಲ್ಲಿ ಮಹಾ ಶಿವರಾತ್ರಿ ನಾಳೆ

ಬೀದರ್:ಫೆ.೧೪: ನಗರದ ಸಿದ್ಧಾರೂಢ ಮಠದಲ್ಲಿ ಫೆ. ೧೫ ರಂದು ಮಹಾ ಶಿವರಾತ್ರಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸಂಜೆ ೬ಕ್ಕೆ ಸಿದ್ಧಾರೂಢರ ಮೂರ್ತಿಗೆ ಮಹಾ ರುದ್ರಾಭಿಷೇಕ, ಸಂಜೆ ೭ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, ಪ್ರವಚನ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದ್ಗುರು ಕೃಪೆಗೆ ಪಾತ್ರರಾಗಬೇಕು ಎಂದು ಮಠದ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಕೋರಿದ್ದಾರೆ.