ಶಿಕ್ಷಣಕ್ಕಾಗಿ ಜಾದೂ

ಕಲಬುರಗಿ:ಜೂ.೨೯:ನಗರದ ರಾಮ ಮಂದಿರ ಹತ್ತಿರವಿರುವ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ “ಶಿಕ್ಷಣಕ್ಕಾಗಿ ಜಾದು” ಎನ್ನುವಂತ ವಿನೂತನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ನಗರದ ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಗೌತಮ್ ಕಾಂಬಳೆ, ಉದ್ಘಾಟಿಸಿದರು.
ಮಕ್ಕಳು ಓದುವ, ಬರೆಯುವುದಕ್ಕಿಂತಲೂ ನೋಡಿ ಹಾಗೂ ಅನುಭವ ಪಡೆದು ಕಲಿಯುವ ಕಲಿಕೆಯು ಹೆಚ್ಚು ಪ್ರಭಾವವಾಗಿರುತ್ತದೆ. ಹೀಗಾಗಿ ಶಿಕ್ಷಕರು ನಲಿ-ಕಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಶಿಕ್ಷಣವನ್ನು ನೀಡಿದರೆ ಮಕ್ಕಳು ತುಂಬಾ ಆಸಕ್ತಿಯಿಂದಓದಿನಲ್ಲಿ ಪ್ರಗತಿಯನ್ನು ಪಡೆಯುತ್ತಾರೆ ಎಂದು ಮಹಾನಗರ ಪಾಲಿಕೆಯ ವಲಯ ಆಯುಕ್ತರಾ ಗೌತಮ್ ಕಾಂಬಳೆ ಹೇಳಿದರು.
ಮಕ್ಕಳು ಪಾಠವನ್ನು ಮರೆತುಬಿಡಬಹುದು ಆದರೆ ಮ್ಯಾಜಿಕ್ ಮೂಲಕ ಕಲಿಸಿದ ಬೋಧನೆಯನ್ನು ಅವರು ಎಂದಿಗೂ ಮರೆಯುವುದಿಲ್ಲ. ಮನೋ ವಿಕಾಸದ ವಿಚಾರಗಳನ್ನು ಜಾದು ತಂತ್ರಗಳ ಮೂಲಕವೇ ತಿಳಿಸುವ, ಆ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ಪರಿಣಾಮಕಾರಿ ಪ್ರೇರಣೆ ನೀಡುವ ವಿಶಿಷ್ಟ ಪ್ರಯತ್ನವೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಕುದ್ರೋಳಿ ಗಣೇಶ್ ಹೇಳಿದರು.
ಜಾದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆಸ್ವಚ್ಛ ಭಾರತದ ಮಹತ್ವ, ಪರಿಸರದ ಕುರಿತು ಮತ್ತು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವ ಕಾರ್ಯತಂತ್ರಗಳನ್ನು ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಮುಖ್ಯಗುರು ಅಂಬಿಕಾ ರೆಡ್ಡಿ, ಶೈಕ್ಷಣಿಕ ಸಂಯೋಜಕರಾದ ನಿಖಿಲ ಪಾಟೀಲ, ಸುಮಾ ಭಗವತಿ, ಸುಷ್ಮಾ ಭಗವತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.