
ಅಫಜಲಪುರ:ಜ.29: ಶ್ರೀ ದತ್ತಾವತಾರಿ ಶ್ರೀನರಸಿಂಹ ಸರಸ್ವತಿ ಸ್ವಾಮಿ ಮಹಾರಾಜರ ನಿರ್ಗುಣ ಮಠ ದತ್ತಾತ್ರೇಯ ದೇವಸ್ಥಾನ ಶ್ರೀಕ್ಷೇತ್ರ ದೇವಲ ಗಾಣಗಾಪುರದಲ್ಲಿ ಮಾಘ ಮಾಸದ ಶುಕ್ಲ ಹುಣ್ಣಿಮೆ ಫೆಬ್ರವರಿ 1ರಿಂದ 5ರವರೆಗೆ ಮಾಘಮಾಸ ಜಾತ್ರಾ ಮಹೋತ್ಸವವು ಜರುಗಲಿದೆ
ಎಂದು ದೇವಲ ಗಾಣಗಾಪುರ ಮುಖ್ಯ ಅರ್ಚಕರು ಹಾಗೂ ಸಾಲಕರಿ ಕಾರ್ಯದರ್ಶಿ ಪ್ರಿಯಾಂಕ್ ಭಟ್ ಪೂಜಾರಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆ.2ರಂದು ಸಂಜೆ 4 ಗಂಟೆಗೆ ಯತಿ ಪೂಜನೆ, ಫೆ.5ಕ್ಕೆ ಮಧ್ಯಾಹ್ನ 12ಕ್ಕೆ
ಗೋಪಾಳ ಕಾಲಾ (ಮೊಸರು ಗಡಿಗೆ)ನಂತರ ಶ್ರೀಗಳ ಅಡ್ಡ ಪಲ್ಲಕ್ಕಿಯು ಭಕ್ತರ ಜಯಘೋಷ ಮತ್ತು ವಾದ್ಯ, ಭಜನೆಯೊಂದಿಗೆ ಅವಕೃತ ಸ್ನಾನಕ್ಕಾಗಿ ರುದ್ರಪಾದ ತೀರ್ಥಕ್ಕೆ ತೆರಳಲಿದೆ. ಭಕ್ತರಿಗಾಗಿ ವಿವಿಧ ಪಾಕಿರ್ಂಗ್
ಮತ್ತು ನಾನಾ ಸವಲತ್ತುಗಳನ್ನು ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

























