
ಕೈಗೆ ಕೋಳ ಹಾಕಿ ಕರೆ ತಂದ ಅಮೆರಿಕ ಅಧಿಕಾರಿಗಳು
ವಾಷಿಂಗ್ಟನ್,ಜ.೪-ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ಒಂದು ದಿನದ ನಂತರ ಅಮೆರಿಕಾದ ನ್ಯೂಯಾರ್ಕ್‌ನಲ್ಲಿರುವ ಮಾದಕ ವಸ್ತು ನಿಯಂತ್ರಣ ಆಡಳಿತ ಕೇಂದ್ರಕ್ಕೆ ಕೈಕೋಳ ಹಾಕಿ ಕರೆ ತಂದ ಮಾದಕ ವಸ್ತು ವಿರೋಧಿ ಪಡೆ ಅಧಿಕಾರಿಗಳು ತೀವ್ರ ವಿಚಾರಣೆ ಆರಂಭಿಸಿದ್ದಾರೆ.
ಮಡುರೊ ಅವರನ್ನು ಮಾದಕ ವಸ್ತು ನಿಯಂತ್ರಣ ಕೇಂದ್ರದ ಸೆಲ್‌ಗೆ ಕರೆತರುವಾಗ ಅವರ ಎರಡು ಕೈಗೆ ಕೈಕೋಳ ಹಾಕಿ ಅಮೆರಿಕದ ಅಧಿಕಾರಿಗಳಿಂದ ಸುತ್ತುವರೆದಿರುವ ವೀಡಿಯೊ ಬಿಡುಗಡೆ ಮಾಡಿದೆ.
ಶ್ವೇತಭವನದ ಅಧಿಕೃತ ರ್‍ಯಾಪಿಡ್ ರೆಸ್ಪಾನ್ಸ್ ಖಾತೆಯಲ್ಲಿ ಅಪರಾಧಿ ನಡೆದಾಗ ಎಂಬ ಅಡಿಬರಹದೊಂದಿಗೆ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕಾದ ಮಾದಕ ವಸ್ತು ಜಾಗೃತದಳದ ಪ್ರಧಾನ ಕಚೇರಿ ಕರೆತರುತ್ತಿರುವ ವಿಡೀಯೋವನ್ನು ಬಿಡುಗಡೆ ಮಾಡಲಾಗಿದೆ.
ನಿನ್ನೆ ಅಮೆರಿಕಾ ವೆನಿಜುವೆಲಾ ಮೇಲೆ ದಾಳಿ ಮಾಡಿ ಅಧ್ಯಕ್ಷ ನಿಕೋಲಸ್ ಮಡುರೋ ಅವರ ಪತ್ನಿ ಸಿಲಿಯಾ ಫೊಲೀರ್ಸ್ ಅವರನ್ನು ಅಮೆರಿಕಾದ ಯುದ್ಧ ನೌಕೆಯಲ್ಲಿ ನ್ಯೂಯಾರ್ಕ್‌ಗೆ ಕರೆತರಲಾಗಿತ್ತು. ಇವರಿಬ್ಬರನ್ನು ನ್ಯೂಯಾರ್ಕ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಅದಕ್ಕೂ ಮೊದಲು ಅಮೆರಿಕಾದ ಮಾದಕ ವಸ್ತು ವಿರೋಧಿ ಪಡೆ ಇವರಿಬ್ಬರನ್ನು ವಿಚಾರಣೆಗೆ ಗುರಿಪಡಿಸಿದೆ.
ವೆನಿಜುವೆಲಾದ ಅಧ್ಯಕ್ಷ ಮತ್ತು ಅವರ ಪತ್ನಿ ಸಿಲಿಯಾ ಫೊಲೀರ್ಸ್ “ಮಾದಕವಸ್ತು ಕಳ್ಳಸಾಗಣೆ ಮತ್ತು ಮಾದಕವಸ್ತು-ಭಯೋತ್ಪಾದನಾ ಪಿತೂರಿಗಳ” ಆರೋಪದ ಮೇಲೆ ವಿಚಾರಣೆಗೆ ಗುರಿಯಾಗಿದ್ದಾರೆ.
ನಿಕೋಲಸ್ ಮಡುರೊ ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಾಣೆಯ ಜಾಲದ ಪ್ರಮುಖ ಸೂತ್ರಧಾರ ಎಂದು ಆರೋಪಿಸಿ, ಅಮೆರಿಕ ಈ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಿಂದಾಗಿ ಲ್ಯಾಟಿನ್ ಅಮೆರಿಕದಲ್ಲಿ ನಿಶ್ಚಿತೆತಯ ಹಾಗೂ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳದ ಹೊರತು ಅಮೆರಿಕ ವೆನೆಜುವೆಲಾವನ್ನು ತನ್ನ ವಶದಲ್ಲಿ ಹಿಡಿದುಕೊಳ್ಳಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸರ್ವಾಧಿಕಾರಿ ನಿಕೋಲಾಸ್ ಮಡುರೊ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಮಾರಕ ಮತ್ತು ಅಕ್ರಮ ಮಾದಕವಸ್ತುಗಳ ಬೃಹತ್ ಸಾಗಣೆಗೆ ಕಾರಣವಾದ ವಿಶಾಲ ಕ್ರಿಮಿನಲ್ ಜಾಲದ ಕಿಂಗ್‌ಪಿನ್ ಆಗಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.
“ಮಡುರೊ ಮತ್ತು ಅವರ ಪತ್ನಿ ಶೀಘ್ರದಲ್ಲೇ ಅಮೆರಿಕದ ನ್ಯಾಯದ ಸಂಪೂರ್ಣ ಶಕ್ತಿ ಎದುರಿಸುತ್ತಾರೆ ಮತ್ತು ಅಮೆರಿಕದ ನೆಲದಲ್ಲಿ ವಿಚಾರಣೆಗೆ ಒಳಗಾಗುತ್ತಾರೆ. ಅಂತಿಮವಾಗಿ ನ್ಯೂಯಾರ್ಕ್‌ಗೆ ಕರೆ ತರಲಾಗಿದೆ ಎಂದು ತಿಳಿಸಿದ್ದಾರೆ.”
ನಮಗೆ ಶಾಂತಿಬೇಕು: ಮಡುರೊ
“ನಮಗೆ ಯುದ್ಧ ಅಗತ್ಯವಿಲ್ಲ, ಶಾಂತಿ ಬೇಕು, ಯಾರು ಹೋರಾಟದಲ್ಲಿ ತೊಡಗಬೇಡಿ..”
ಅಮೆರಿಕಾದ ಭದ್ರತಾ ಪಡೆಗಳು ಮತ್ತು ಮಾದಕ ವಸ್ತು ವಿರೋಧ ಪಡೆಗಳು ಸೆರೆಯುವ ಕೆಲವೇ ಕ್ಷಣಗಳ ಹಿಂದೆ ಬೆಂಬಲಿಗರನ್ನುದ್ದೇಶಿಸಿ ವೆನುಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ ಮಾಡಿದ ಭಾಷಣ ಇದು.
ಈ ವೇಳೆ ಅವರು ವೆನಿಜುವೆಲಾ ಶಾಂತಿ ಬಯಸುತ್ತದೆ. ಹೀಗಾಗಿ ಯಾರೂ ಅಶಾಂತಿಯ ಮಾರ್ಗ ಹಿಡಿಯಬೇಡಿ.,”ವೆನಿಜುವೆಲಾ ಶ್ರೇಷ್ಠವಾಗಲು, ನಾವು ಯಾರಿಗೂ ನೋವುಂಟು ಮಾಡಬೇಕಾಗಿಲ್ಲ” ಎಂದಿದ್ದಾರೆ.
ಕಠಿಣ ಪರಿಶ್ರಮ, ಪ್ರಯತ್ನ ಮತ್ತು ಬದ್ಧತೆಯ ಮೂಲಕ ವೆನಿಜುವೆಲಾವನ್ನು ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವುದು ನಮ್ಮ ಕನಸು ಅದನ್ನು ನನಸು ಮಾಡೋಣ ಇದಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದು ಹೇಳಿದ್ದಾರೆ.
ಅಮೆರಿಕಾ ಸ್ನೇಹಿತ – ಸ್ನೇಹಪರ, ಶಾಂತಿಯುತ ರಾಷ್ಟ್ರ ಮತ್ತು ಸ್ನೇಹಪರ ಸರ್ಕಾರವೂ ಇದೆ ಎಂದು ತಿಳಿದಿರಬೇಕು.” ಹೊಸ ವರ್ಷದ ಮುನ್ನ ದಿನ ಸುದ್ದಿಗಾರೊಂದಿಗೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದರು.
“ನಮ್ಮ ಸಂದೇಶ ತುಂಬಾ ಸ್ಪಷ್ಟವಾಗಿದೆ. ‘ಯುದ್ಧವಲ್ಲ. ಶಾಂತಿ’ ಬಯಸುವುದಾಗಿದೆ ಎನ್ನುವ ಮೂಲಕ ಅಮೆರಿಕಾಕ್ಕೆ ಶಾಂತಿಯ ಸಂದೇಶ ರವಾನಿಸಿದ್ದಾರೆ.
ಹೊಸ ವರ್ಷದ ಮುನ್ನಾದಿನದ ಒಂದು ಗಂಟೆಯ ಡ್ರೈವ್ ಮಡುರೊ ಅವರ ಕೊನೆಯ ಸಂದರ್ಶನದಲ್ಲಿ ವೆನಿಜುವೆಲಾದ ದೂರದರ್ಶನದಲ್ಲಿ ಅಮೆರಿಕ ಪಡೆಗಳು ಕ್ಯಾರಕಾಸ್ ಮೇಲೆ ದಾಳಿ ನಡೆಸುತ್ತಿವೆ. ಪ್ರತಿಯಾಗಿ ನಾವೂ ದಾಳಿ ನಡೆಸಬಹುದು ಆದರೆ ಅದು ಶಾಶ್ವತವಲ್ಲ ನಮಗೆ ಶಾಂತಿ ಮುಖ್ಯ ಎಂದಿದ್ದಾರೆ.
ಪತ್ನಿ ಸಿಲಿಯಾ ಫೊಲೀರ್ಸ್‌ನೊಂದಿಗೆ ಬೆಳ್ಳಿ ಟೊಯೋಟಾ ಚಾಲನೆ ಮಾಡುವ ವೇಳೆ ಮಡುರೊ ವೆನಿಜುವೆಲಾವನ್ನು ನಡೆಸುವ ತನ್ನ ಯಶಸ್ಸಿನ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಶಾಂತಿ ಮತ್ತು ಪ್ರೀತಿಯ ಅಧ್ಯಕ್ಷರಾಗಿ ತಮ್ಮನ್ನು ಬಿಂಬಿಸಿಕೊಳ್ಳಲು ನಿಕೋಲಾಸದ ಮಡುರೊ ಮಾಡಿದ ಪ್ರಯತ್ನಕ್ಕೆ ಪೂರಕವಾಗುವಂತಿತ್ತು.
ದಾಳಿಯಲ್ಲಿ ೪೦ ಮಂದಿ ಸಾವು
ವೆನಿಜುವೆಲಾ ರಾಜಧಾನಿ ಕ್ಯಾರಕಾಸ್‌ನಲ್ಲಿರುವ ದೇಶದ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಅಮೆರಿಕಾದ ಭದ್ರತಾ ಪಡೆಗಳು ದಾಳಿಗಳನ್ನು ನಡೆಸಿದ ಪರಿಣಾಮ ಸುಮಾರು ೪೦ ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ದಾಳಿಗಳನ್ನು ಅಮೆರಿಕಾ ಪಡೆಗಳು ತಿಂಗಳುಗಳ ಯೋಜನೆ ಮತ್ತು ಮರು ಕಾರ್ಯಾಚರಣೆಗಳ ನಂತರ ನಡೆಸಲಾಗಿದೆ ಎಂದು ಅಮೆರಿಕಾ ಭದ್ರತಾ ಪಡೆಗಳು ಮಾಹಿತಿ ನೀಡಿವೆ.
ಅಮೆರಿಕಾ ಪಡೆಗಳು ಈ ಪ್ರದೇಶದಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸಿಕೊಂಡಿದ್ದ ಬಾರಿ ಪ್ರಮಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವೆನಿಜುವೆಲಾದಿಂದ ಮಾದಕವಸ್ತು ಮತ್ತು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಹಡಗುಗಳನ್ನು ಸಹ ಗುರಿಯಾಗಿಸಿಕೊಂಡಿದ್ದವು ದಾಳಿ ನಡೆಸಲಾಗಿತ್ತು ಇದೀಗ ನಿಕೋಲಾಸ್ ಮಡುರೊ ಅವರನ್ನು ಬಂಧಿಸಲಾಗಿದೆ
























