
ಸಂಜೆ ವಾಣಿ ವಾರ್ತಾ
ಕಮಲನಗರ: ತಾಲೂಕಿನ ಡಿಗ್ಗಿ ಗ್ರಾಮದ ಆರಾಧ್ಯ ದೈವ ಶ್ರೀ ಮಡಿವಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಂದು ವಿಜೃಂಭಣೆಯ ಮಹಾಪ್ರಸಾದ ಕಾರ್ಯಕ್ರಮ ಜರುಗಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳು ಶ್ರೀ ಮಡಿವಾಳೇಶ್ವರ ದೇವರ ದರ್ಶನ ಪಡೆದು, ಪ್ರಸಾದ ಸೇವಿಸಿ ಧನ್ಯತೆ ಮೆರೆದರು.
ಉತ್ಸವದ ಪ್ರಯುಕ್ತ ಮುಂಜಾನೆಯಿAದಲೇ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊAಡವು. ಅರ್ಚಕ ಚಂದ್ರಕಾAತ ಸ್ವಾಮಿ ಅವರು ಶ್ರೀ ದೇವರಿಗೆ ಮಹಾ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು. ತದನಂತರ ಮಡಿವಾಳೇಶ್ವರ ದೇವರ ಭವ್ಯ ಮೂರ್ತಿಯನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು.
ವಿಶೇಷ ಮಹಾಪ್ರಸಾದ ವಿತರಣೆ:
ಜಾತ್ರೆಯ ಅಂಗವಾಗಿ ಆಗಮಿಸಿದ ಎಲ್ಲಾ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ಗೋಧಿ ಹುಗ್ಗಿ, ಹಾಲು, ತುಪ್ಪ, ಚಪಾತಿ, ಸಪ್ಪನ್ ಬ್ಯಾಳಿ, ಹಪ್ಪಳ, ಚಟ್ನಿ, ಅನ್ನ ಹಾಗೂ ಅಂಬುರ ಪ್ರಸಾದವನ್ನು ಅತ್ಯಂತ ಶ್ರದ್ಧೆಯಿಂದ ಸವಿದರು.
ಈ ಮಹೋತ್ಸವದಲ್ಲಿ, ಶ್ರೀ ಮಡಿವಾಳೇಶ್ವರ ದೇವಾಲಯ ಟ್ರಸ್ಟ್ ‘ನ ಪದಾಧಿಕಾರಿಗಳು ಹಾಗೂ ಡಿಗ್ಗಿ ಗ್ರಾಮದ ಅಣ್ಣನ ಬಳಗ, ಅಕ್ಕನ ಬಳಗ ಹಾಗೂ ಕಮಲನಗರ, ಹೊಳಸಮುದ್ರ, ರಾಂಪುರ, ಖಾತಗಾಂವ, ಕೋಟಗ್ಯಾಳ, ಬಾಲೂರ ಸೇರಿದಂತೆ ವಿವಿಧ ನೆರೆಹೊರೆಯ ಹಳ್ಳಿಗಳ ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದುಕೊಂಡು ಪುನಿತರಾದರು.
ಹೀಗೆ ದಿನನಿತ್ಯದ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಗ್ರಾಮಸ್ಥರ ಯುವ ತಂಡದವರು ಉಪಸ್ಥಿತಿಯಲ್ಲಿದರು, ಎಲ್ಲ ಕಾರ್ಯಕ್ರಮಕ್ಕೆ ಊರಿನ ಹಿರಿಯರ ಮಾರ್ಗದರ್ಶನ ಹೊಂದಿಗೆ ಜಾತ್ರಾ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭವ್ಯ ಮತ್ತು ದಿವ್ಯವಾಗಿ ನೆರವೇರಿತು.
























