ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಚಿತ್ತಾಪುರ;ಫೆ.1: ಪಟ್ಟಣದ ಪ್ರಜಾಸೌಧ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ವಚನ ಸಾಹಿತ್ಯದ ಸರ್ವಶ್ರೇಷ್ಠ ಶರಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು.
ಇದೇ ವೆಳೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪಂಡೀತ್ ಸಿಂಧೆ, ಸಾಬಣ್ಣ ಮುಡಬೂಳ, ಸುರೇಶ, ವಿಜಯಕುಮಾರ, ದೇವೇಂದ್ರ, ಅಶೋಕ, ನಾಗಣ್ಣ ದಿಗ್ಗಾಂವ, ಬಸವರಾಜ, ರಾಘವೇಂದ್ರ ಕೊಂಡಪಳ್ಳಿ, ಶಿವಕುಮಾರ್ ಹೇರೂರ, ಸಿದ್ದರಾಜ ಹೂಗಾರ, ಮಲ್ಲಿಕಾರ್ಜುನ, ಗುರು, ಶ್ಯಾಮ್ ಮೇಧಾ, ವಿಶ್ವರಾಧ್ಯ, ರಮೇಶ ವಾಡಿ, ಗೌರೇಶ, ಚಿಂಚಕರ್ ವಾಡಿ, ಶರಣಪ್ಪ ಬೆಳಗೇರಿ, ಮಹೇಶ ಬೆಳಗುಂಪಾ, ಸಂತೋಷ ಬೆಳಗುಂಪಾ, ಮಲ್ಲಿನಾಥ ಕೊಲಕುಂದಿ ಸೇರಿದಂತೆ ಇತರರು ಇದ್ದರು.