
ಕಾಳಗಿ:ಫೆ.1:ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತುಳಿತಕ್ಕೊಳಗಾಗಿರುವ ಮಾದಿಗರೇ… ಮಳ್ಳರಾಗದೆ ಇನ್ನಾದರೂ ಎಚ್ಚರವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿರಿ.
ವಿವಿಧ ರಾಜಕೀಯ ಪಕ್ಷಗಳ ಬಣ್ಣದ ಮಾತಿಗೆ ಮರುಳಾಗಿ ತಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದು ಕರ್ನಾಟಕ ಮಾದರ ಮಹಾ ಸಭಾದ ಕಲಬುರಗಿ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ತಮ್ಮ ಸಮಾಜ ಬಾಂಧವರಿಗೆ ಕರೆ ನೀಡಿದರು.
ಪಟ್ಟಣದ ಭರತನೂರ ರಸ್ತೆಯಲ್ಲಿರುವ ಅಂಭಾ ಭವಾನಿ ಕಲ್ಯಾಣ ಮಂಟಪದಲ್ಲಿ ಶನಿವಾರ
ಕರ್ನಾಟಕ ಮಾದರ ಮಹಾಸಭಾ ಕಾಳಗಿ ತಾಲೂಕು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಮಾದರ ಮಹಾ ಸಭಾ ವತಿಯಿಂದ ರಾಜ್ಯದ ಜನತೆಗೆ ಸಮುದಾಯ ಬಲವರ್ಧನೆ, ಶೈಕ್ಷಣಿಕ ಮತ್ತು ಸಾಮಾಜಿಕ ಬೆಂಬಲ ನೀಡಲು ಸದಸ್ಯತ್ವ ನೋಂದಣಿ ಅಭಿಯಾನ ಅಗತ್ಯವೆಂದರು.
ಸಮಾಜದ ಯುವ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ,
ಸಮುದಾಯದ ವ್ಯಕ್ತಿಗಳಿಗೆ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವುದು, ವಿಶೇಷವಾಗಿ ಐಎಎಸ್, ಕೆಎಎಸ್ ತರಬೇತಿ ಸಹಾಯ ವದಗಿಸುವ ಮೂಲಕ
ಸಮಾಜದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸುವುದಾಗಿದೆ ಎಂದರು.
ಸಮಾಜದ ಹಿರಿಯ ಮುಖಂಡ ಶಾಮ ನಾಟಿಕಾರ, ಪರಮೇಶ್ವರ ಖಾನಾಪೂರ, ಲಿಂಗರಾಜ ತಾರಪೇಲ್, ಗುಂಡಪ್ಪ ಸಿಲ್ಡೌನ್ ಮಾತನಾಡಿದರು.
ಪ್ರಮುಖರಾದ ರೇವಣಸಿದ್ದ ಕಟ್ಟಿಮನಿ, ಮಾಣಿಕ ಸಿಂಧೆ, ಮಲ್ಲಿಕಾರ್ಜುನ ಸಿಂಗೆ, ಸುಂದರ ಡಿ.ಸಾಗರ, ಶರಣು ಸಗರಕರ್, ನರಸಪ್ಪ ಕಿವುಡನೋರ, ಹರೀಶ ಸಿಂಗೆ, ರವಿ ಸಿಂಗೆ, ಶಿವಶಂಕರ ವಾಲಿಕಾರ, ಶರಣು ರಾಜಾಪೂರ, ಮಹೇಶ ಭರತನೂರ, ಕಿರಣ ರಾಜಾಪೂರ, ಅನೀಲ ಕ್ರಾಂತಿ, ರೇವಣಸಿದ್ಧ ಕೋಡ್ಲಿ, ಮಹೇಶ ತಾಡಪಳ್ಳಿ, ಅಜೀತ ರಟಕಲ್, ಸುಭಾಷ ಮೋಘಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೃಷ್ಣಾ ಕಟ್ಟಿಮನಿ ನಿರೂಪಿಸಿ ವಂದಿಸಿದರು.























