ದೇವರ ಪ್ರಾರ್ಥನೆಯ ಮೂಲಕ ಮೇಲು ಕೀಳು ದೂರಮಾಡಿದವರು ಮದಾನಂದತೀರ್ಥರು:ಪAಡಿತರAಗಾಚಾರ್ಯ ಜೋಶಿ

ಸಂಜೆ ವಾಣಿ ವಾರ್ತೆ
ಜಮಖಂಡಿ:ಜ.೨೮:ಭಗವAತನ ಸರ್ವೋತ್ತಮ ಮತ್ತು ಆರಾಧನೆಯನ್ನು ಹೇಗೆ ಮಾಡಬೇಕು ಎಂದು ಮಹಾನುಭಾವ ಮಧ್ವ ಮತ ಪ್ರತಿಪೊದಕ ವೈಷ್ಣವ ಸಂಪ್ರದಾಯದ ಧೀಮಂತರಾದ ಶ್ರೀ ಮದಾನಂದತೀರ್ಥರು ತಿಳಿಸಿದ್ದಾರೆ ಎಂದು ಮಠಾಧಿಕಾರಿ ಪಂಡಿತರAಗಾಚಾರ್ಯ ಜೋಶಿ ಹೇಳಿದರು.
ಸ್ಥಳೀಯ ಸಿದ್ದರಾಮೇಶ್ವರ ಕಾಲನಿ ಉತ್ತರಾದಿ ಮಠದಲ್ಲಿ ಬ್ರಾಹ್ಮಣ ಸಮಾಜ, ವಿಶ್ವ ಮಧ್ವ ಮಹಾಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀಮಧ್ವ ನವಮಿ ನಿಮಿತ್ಯ ಉಪನ್ಯಾಸ ನೀಡಿದ ಅವರು ಪ್ರತಿಯೊಬ್ಬ ದೇವರ ಆರಾಧನೆಯನ್ನು ಪ್ರಮುಖವಾಗಿ ತಿಳಿಸಿದ್ದಾರೆ ಪಂಚ ರೂಪವಾದ ರುದ್ರದೇವರ ಪ್ರಾರ್ಥನೆಯ ಜೊತೆಗೆ ಯಾರೂ ಮೇಲು ಕೀಳು ಎನ್ನುವದನ್ನು ದೂರಮಾಡಿದ್ದಾರೆ ಅದರ ಜೊತೆಗೆ ಭಗವಂತನ ಸರ್ವೋತ್ತಮ ಸಿಧ್ದಾಂತವನ್ನು ತಿಳಿಸಿದ್ದಾರೆ ಎಂದರು.
ಎಲ್ಲ ಜೀವಗಳು ಭಿನ್ನವೆಂದು ತಿಳಿಸಿದ್ದಾರೆ ಕಣ್ಣಿಗೆ ಕಾಣುವದು ಎಷ್ಟು ಸತ್ಯವೋ ಅಷ್ಟೇ ಕಾಣದ ವಸ್ತುವೂ ಸಹ ಅಷ್ಟೇ ಸತ್ಯ ಎಂದು ಒಪ್ಪಕೊಳ್ಳುವ ವೇದದ ಪ್ರಮಾಣವನ್ನು ತಿಳಿಸಿದ್ದಾರೆ. ವೇದಗಳನ್ನು ಪ್ರಮಾಣೀಕರಿಸಲು ನಮ್ಮಲ್ಲಿ ಯೋಗ್ಯತೆ ಬೇಕು ಅಂತಹ ವೇದಗಳ ಪ್ರಮಾಣವನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಪಂಡಿತ ಸುಜಯೀಂದ್ರಚಾರ್ಯ ಮನಗೂಳಿ ಉಪನ್ಯಾಸ ನೀಡಿದರು.
ಬ್ರಾಹ್ಮಣ ಪತ್ತಿನ ಸಹಕರ ಸಂಘದ ಅಧ್ಯಕ್ಷ ಪ್ರಹ್ಲಾದ ಉಪಾÀಧ್ಯೆ, ವಿಠ್ಠಲಾಚಾರ್ಯ ಉಮರ್ಜಿ, ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರ ಉಮರ್ಜಿ, ರಾಮರಾವ ದೇಶಪಾಂಡೆ, ಅನಿಲ ದೇಶಪಾಂಡೆ, ಅಶೋಕ ಕುಲಕರ್ಣಿ,ವಾದಿರಜ ಗಲಗಲಿ, ಶ್ರೀನಿವಾಸ ದೇಶಪಾಂಡೆ, ರಾಘವೇಂದ್ರ ತೇರದಾಳ, ಇನ್ನಿತರರು ಇದ್ದರು.