ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಿದ ಮಚಾಡೊ

ವಾಷಿಂಗ್ಟನ್,ಜ.೧೬- ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ತಮಗೆ ಸಂದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವರಿಗೆ ಪ್ರದಾನ ಮಾಡಿದ್ದಾರೆ.

ಶ್ವೇತಭವನದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನೊಬೆಲ್ ಶಾಂತಿ ಪುರಸ್ಕಾರವನ್ನು ಅಮೆರಿಕಾ ಅಧ್ಯಕ್ಷರಿಗೆ ಪ್ರಧಾನ ಮಾಡಿದ್ದೇನೆ ಎಂದು ಮಾರಿಯಾ ಮಚಾಡೊ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಅವರು ವೆನಿಜುವೆಲಾದ ಮಂದಿಗೆ ಐತಿಹಾಸಿಕ ದಿನ ಎಂದು ಭಾವಿಸುತ್ತೇನೆ” ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಅಮೆರಿಕಾ ಕೈಗೊಂಡ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿ ನೊಬೆಲ್ ಪ್ರಶಸ್ತಿ ನೀಡಿರುವುದಾಗಿ ತಿಳಿಸಿದ್ದಾರೆ

ಅಮೆರಿಕದ ಪಡೆಗಳು ಕ್ಯಾರಕಾಸ್‌ನಲ್ಲಿ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಂಡು ಅವರ ಮೇಲೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣದ ಆರೋಪ ಹೊರಿಸಿದ ವಾರಗಳ ನಂತರ ಈ ಬೇಟಿ ನಡೆದಿದ್ದು, ಇದೊಂದು ಮಹತ್ವಪೂರ್ಣ ಭೇಟಿ ಎಂದು ಬಣ್ಣಿಸಿದ್ದಾರೆ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪುರಸ್ಕಾರ ನೀಡಿದ್ದಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ಬಹುಮಾನ ಸ್ವೀಕರಿಸುವುದು “ಪರಸ್ಪರ ಗೌರವದ ಸೂಚಕ” ಎಂದು ಹೇಳಿದ್ದಾರೆ.

೨೦೨೪ ರ ವ್ಯಾಪಕವಾಗಿ ಸ್ಪರ್ಧಿಸಿದ ಚುನಾವಣೆಗಳಲ್ಲಿ ಜಯ ಸಾಧಿಸಿದ ಚಳುವಳಿಯನ್ನು ಪ್ರತಿಪಾದಿಸಿದ ಮಾರಿಯಾ ಮಚಾಡೊ ಅವರನ್ನು ವೆನಿಜುವೆಲಾದ ಹೊಸ ನಾಯಕಿಯಾಗಿ ಅನುಮೋದಿಸಲು ಅಮೆರಿಕ ಅಧ್ಯಕ್ಷರು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ

ವೆನಿಜುವೆಲಾದ ಹಂಗಾಮಿ ರಾಷ್ಟ್ರದ ಮುಖ್ಯಸ್ಥೆ, ಮಡುರೊ ಅವರ ಮಾಜಿ ಉಪಾಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ವ್ಯವಹರಿಸುತ್ತಿದ್ದಾರೆ. ಹೀಗಾಗಿ ಮಾರಿಯೋ ಮಚಾದೋ ಅವರನ್ನುನೂತನ ನಾಯಕಿ ಎಂದು ಘೋಷಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ

ಅಮೆರಿಕದ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಪ್ರದಾನ ಮಾಡಿದ್ದೇನೆ” ಸ್ವಾತಂತ್ರ್ಯದೊಂದಿಗಿನ ಅವರ ಅನನ್ಯ ಬದ್ಧತೆಗೆ ಒಂದು ಮನ್ನಣೆ” ಎಂದು ಮಾಹಿತಿ ನೀಡಿದ್ದಾರೆ.