
ಬೆಂಗಳೂರು ಮಾ. ೭-ವಿಶ್ವಭೂಪಟದಲ್ಲಿ ಸಿಲಿಕಾನ್ ಸಿಟಿ ಎಂದು ಬಿರುದಾಂಕಿತ ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳಿಗೆ ರಾಜ್ಯ ಬಜೆಟ್ ನಲ್ಲಿ ನೀಡಿರುವ ಅನುದಾನ ನಗಣ್ಯ ಎಂದು ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅವಿನ್ ಆರಾಧ್ಯ ಟೀಕೆಸಿದ್ದಾರೆ ಕಳೆದ ಮೂರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಸರ್ಕಾರ ಬಜೆಟ್ ನಲ್ಲಿ ನೀಡಿರುವ ಈ ಅನುದಾನ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಸಾಕಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಗ್ರೇಟರ್ ಬೆಂಗಳೂರು ಹೆಸರು ನೀಡಿದರೆ ಸಾಲದು ಅದಕ್ಕೆ ತಕ್ಕನಾದ ಅನುದಾನ ನೀಡಿದರೆ ಮಾತ್ರ ತಾಳೆಯಾಗುತ್ತದೆ .
ರಾಜ್ಯಸರ್ಕಾರ ಇದರ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸವೇ ಸರಿ.” ಎಂದು ಹೇಳಿದ್ದಾರೆ ಈ ಬಜೆಟ್ ನಲ್ಲಿ ಜಿಬಿಎಗೆ ನೀಡಿರುವ ಅನುದಾನ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ”ಯoತಿದ್ದು ಗ್ರೇಟರ್ ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ ಗ್ರಹಣ. ಹಿಡಿಯಲಿದೆ ಎಂದು ಅವರು ತಿಳಿಸಿದ್ದಾರೆ






















