ಸಮರಸ ಜೀವನಕ್ಕೆ ಪ್ರೀತಿ,ವಿಶ್ವಾಸ,ಗೌರವ ಮುಖ್ಯ

ಕಲಬುರಗಿ:ಅ.19:ದಾಂಪತ್ಯ ಜೀವನದಲ್ಲಿ ಸಮರಸ ಭಾವ ಅತ್ಯಗತ್ಯ ಎಂದು ಬಸವಣ್ಣನವರು ಹೇಳಿದರು. ಸತಿ-ಪತಿಯರು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಬದುಕಬೇಕು ಎಂದು ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿದ್ಧಲಿಂಗಪ್ಪ ಬಾಗಲಕೋಟೆ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರಾವಣ ಮಾಸದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣ ವಿಷಯದ ಶೀರ್ಷಿಕೆ ಅಡಿಯಲ್ಲಿ ಬಸವಣ್ಣ ಮತ್ತು ಸತಿಪತಿ ಸಮರಸಭಾವ ಎಂಬ ವಿಷಯ ಕುರಿತು ಮಾತನಾಡಿದರು.
ಬಸವಣ್ಣನವರ ವಚನಗಳಲ್ಲಿ ದಾಂಪತ್ಯ ಜೀವನದಲ್ಲಿ ಸಮಾನತೆ ಮತ್ತು ಪರಸ್ಪರ ಗೌರವದ ಮಹತ್ವವನ್ನು ಒತ್ತಿ ಹೇಳಲಾಗಿದೆ. ಸತಿ ಮತ್ತು ಪತಿ ಇಬ್ಬರು ಒಬ್ಬರನ್ನೊಬ್ಬರು ಅಥರ್Àಮಾಡಿಕೊಂಡು ಪರಸ್ಪರರ ಆಸಕ್ತಿಗಳನ್ನು ಗೌರವಿಸಬೇಕು ಎಂದು ಹೇಳಿದರು. ಬಸವಣ್ಣನವರ ಪ್ರಕಾರ, ದಾಂಪತ್ಯ ಜೀವನವು ಕೇವಲ ಲೌಕಿಕ ಸುಖಕ್ಕಾಗಿ ಅಲ್ಲ, ಬದಲಾಗಿ ಆಧ್ಯಾತ್ಮಿಕ ಸಾಧನೆಗಾಗಿ ಕೂಡಾ ಆಗಿದೆ. ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ದಾಂಪತ್ಯ ಜೀವನದಲ್ಲಿ ದೇವರನ್ನು ಕಾಣಬಹುದು.
ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ತಮ್ಮ ದಾಸೋಹ ಸೂತ್ರದಲ್ಲಿ ಮದುವೆಯು ಎರಡು ಶರೀರ, ಎರಡು ಮನ, ಎರಡು ಆತ್ಮಗಳ ಸುಮಧುರ ಬಾಂಧವ್ಯ, ಇಂಥ ಬಂಧನಕ್ಕೊಳಗಾದ ಸತಿಯು ಪತಿಯಲ್ಲಿ ಪರಮಾತ್ಮನನ್ನು ಕಾಣುತ್ತಾಳೆ. ಪತಿಯು ಸತಿಯಲ್ಲಿ ಪರಾಶಕ್ತಿಯನ್ನು ಕಾಣುತ್ತಾನೆ. ಇದು ಪರಸ್ಪರ ಪರಹಿತದಲ್ಲಿ ಸ್ವಹಿತದ ಸವಿಯನ್ನು ಅನುಭವಿಸುವ ದಾಸೋಹ ಕ್ರಿಯೆ ವಿವಾಹದ ಉದ್ದೇಶವು ದಾಸೋಹ ಮಾಡುವ ಸಂತತಿಯ ಪಡೆವುದಾಗಿದೆ. ಜಗತ್ತಿನಲ್ಲಿರುವ ಸ್ತ್ರೀ ಪುರುಷರೆಲ್ಲರೂ ಲಿಂಗಪತಿಗೆ ಶರಣ ಸತಿಯರು ಎಂದು ಭಾವಿಸುವುದು ಮಹತ್ವದಾಗಿದೆ.
ಸಂಸಾರದಲ್ಲಿ ಆಸರಿಕೆ-ಬೇಸರಿಕೆ ನೋವು-ನಲಿವು, ಸುಖ-ದುಃಖ, ಶಾಂತಿ-ಕಲಹ ಎಲ್ಲವು ಕಾಣುತ್ತೇವೆ. ಕುಟುಂಬದಲ್ಲಿ ದಾಂಪತ್ಯ ಜೀವನವು ಹೊಂದಾಣಿಕೆಯಿಂದ ಸಾಗಬೇಕು. ಚಕ್ಕಡಿಯ ಎರಡು ಚಕ್ರಗಳು ಅಡ್ಡಾ-ದಿಡ್ಡಿ ಸಾಗಿದರೆ ಅನಾಹುತ ತಪ್ಪಿದಲ್ಲ. ಪತಿ-ಪತ್ನಿ ಸರಿಸಮಾನವಾಗಿ ಒಬ್ಬರನ್ನೊಬ್ಬರು ಪ್ರೀತಿಯಿಂದ ಗೌರವಿಸಬೇಕು. ಇಂಥ ಸಮರಸ ದಾಂಪತ್ಯ ಜೀವನವು ಬಸವಣ್ಣನವರದಾಗಿತ್ತು. ಗಂಡ-ಹೆಂಡತಿ ನಡುವೆ ಲೌಕಿಕ ಜೀವನದಲ್ಲಿ ಅಷ್ಟೇ ಅಲ್ಲ. ಅಲೌಕಿಕ ಜೀವನದಲ್ಲೂ ಬಿರುಕು ಹುಟ್ಟುತ್ತದೆ. ಇಬ್ಬರು ಮೌನವಾಗಿದ್ದರೆ ಜಗಳವಿಲ್ಲ. ಕೊರಗು ಇದೆ. ಕಲಹದ ಬದುಕು ನರಕದಂತೆ ಅಂಥ ಬದುಕು ಬೇಡವೆನ್ನುತ್ತಾರೆ ಬಸವಣ್ಣನವರು. ಹೆಂಡತಿಯ ತಪ್ಪನ್ನು ಗಂಡ, ಗಂಡನ ತಪ್ಪನ್ನು ಹೆಂಡತಿ ಮನ್ನಿಸಿ ಸಮರಸ ಜೀವನ ನಡೆಸುವುದೇ ಸಂಸಾರದ ಗುಟ್ಟಾಗಿದೆ ಎಂದು ಬಸವಣ್ಣ ಹೇಳಿದ್ದಾರೆ ಎಂದರು. ನಂತರ ಸಂಚಾಲಕ ಡಾ.ಶಿವರಾಜ ಶಾಸ್ತ್ರಿ ಹೇರೂರ್, ಪ್ರಾಚಾರ್ಯರಾದ ಡಾ.ಸುರೇಶಕುಮಾರ ನಂದಗಾಂವ ಮಾತನಾಡಿದರು.