Home ಜಿಲ್ಲೆ ಎಲ್ಲ ಧರ್ಮಗಳನ್ನು ಪ್ರೀತಿಸಿ ಗೌರವಿಸಿ: ವಿಶ್ವನಾಥ್ ಸ್ವಾಮಿ

ಎಲ್ಲ ಧರ್ಮಗಳನ್ನು ಪ್ರೀತಿಸಿ ಗೌರವಿಸಿ: ವಿಶ್ವನಾಥ್ ಸ್ವಾಮಿ

ಬೀದರ್: ಎಲ್ಲ ಧರ್ಮಗಳನ್ನು ಪ್ರೀತಿಸಿ ಗೌರವಿಸುವ ಮನೋಭಾವ ಬೆಳೆಸಿದಾಗ ಸಮಾಜದಲ್ಲಿ ಸುಖ, ಶಾಂತಿ ಮತ್ತು ಬ್ರಾತೃತ್ವ ಭಾವನೆ ವೃದ್ಧಿಸುತ್ತದೆ ಎಂದು ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಸ್ವಾಮಿ ಹೇಳಿದರು.

ನಗರದ ರಾಂಪುರೆ ಬ್ಯಾಂಕ್ ಕಾಲೋನಿಯ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಸಾಯಂಕಾಲ ನಡೆದ ಸೌಹಾರ್ದತೆ ಇಫ್ತಾರ್ ಕೋಟದಲ್ಲಿ ಮಾತನಾಡಿದ ಅವರು, ಪ್ರೀತಿ, ಸೌಹಾರ್ದತೆ ಮತ್ತು ಅನನ್ಯತೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಿಯಾಜಪಾಶಾ ಕೊಳ್ಳೂರ ಮಾತನಾಡಿ, ಪ್ರೀತಿಯನ್ನು ಹಂಚಿದಷ್ಟು ಹೆಚ್ಚಾಗುತ್ತದೆ ನಾವೆಲ್ಲರೂ ಒಂದೇ ಎಂಬ ಭಾವನೆ ಇದು ಎಲ್ಲರಿಗೂ ಮಾದರಿಯಾಗುತ್ತದೆ ಎಂದು ಹೇಳಿದರು.

ಮುಖಂಡ ಶ್ರೀಮಂತ ಕೆದೊಡ್ಡಿ ಮಾತನಾಡಿ, ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವುದೇ ಇಫ್ತಾರ್ ಕೂಟದ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಕುಮಾರ್ ಮಾಲೆದುಡ್ಡಿ, ಗಣಪತಿ ಭಕ್ತ, ರಾಣಿ ಪಾಟೀಲ, ಅನುರಾಧಾ ವರ್ಮಾ, ಶಿವಕುಮಾರ ಬೆಳ್ಳುರೆ, ನಾಗೇಂದ್ರ, ಮಹಾನಂದಾ, ಅಶ್ವಿನಿ, ಅರ್ಜುನ, ಮಹಾದೇವಿ, ಭಾಗ್ಯಜೋತಿ, ಸವಿತಾ ಕಡ್ಡೆ ಇದ್ದರು.