
ಅಳಂದ,ನ.5: ತಾಲೂಕಿನ ನರೋಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 8 ಮೊಬೈಲ್ ಫೆÇೀನ್‍ಗಳನ್ನು ಕೇಂದ್ರ ಸರ್ಕಾರದ ಸಿಇಐಆರ್ ಪೆÇೀರ್ಟಲ್ ಮೂಲಕ ಯಶಸ್ವಿಯಾಗಿ ಠಾಣೆ ಪಿಎಸ್ ಐ ಸಿದ್ದರಾಮ ನಿಂಬರಗಿ ನೇತ್ರತ್ವದಲ್ಲಿ ಪತ್ತೆಹಚ್ಚಲಾಗಿದೆ.
ಈ ಮೊಬೈಲ್‍ಗಳನ್ನು ನರೋಣ ಪೆÇಲೀಸ್ ಠಾಣೆಯಲ್ಲಿ ಡಿವೈಎಸ್‍ಪಿ ತಮ್ಮರಾಯ ಪಾಟೀಲ್, ಸಿಪಿಐ ಪ್ರಕಾಶ್ ಯಾತನೂರ ಮಾರ್ಗದರ್ಶನದಲ್ಲಿ ಸಂಬಂಧಪಟ್ಟ ಮಾಲೀಕರಿಗೆ ಔಪಚಾರಿಕವಾಗಿ ಹಿಂದಿರುಗಿಸಲಾಯಿತು. ಸಿಇಐಆರ್ ಪೆÇೀರ್ಟಲ್‍ನ ಸಹಾಯದಿಂದ ಕಳ್ಳತನ ಅಥವಾ ಕಳೆದುಹೋಗಿದ್ದ ಮೊಬೈಲ್‍ಗಳನ್ನು ತ್ವರಿತವಾಗಿ ಪತ್ತೆಹಚ್ಚಿ, ಬ್ಲಾಕ್ ಮಾಡಿ, ಮರಳಿ ಸಕ್ರಿಯಗೊಳಿಸುವ ಪ್ರಕ್ರಿಯೆಯು ದೇಶಾದ್ಯಂತ ಯಶಸ್ವಿಯಾಗಿ ಜಾರಿಯಲ್ಲಿದೆ. ನರೋಣ ಪೆÇಲೀಸರ ಈ ಕಾರ್ಯ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ. ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವುದು ನಮ್ಮ ಕರ್ತವ್ಯ ಎಂದು ಡಿವೈಎಸ್‍ಪಿ ತಮ್ಮರಾಯ ಪಾಟೀಲ್ ಅವರು ಹೇಳಿದರು.






























