Home ಜಿಲ್ಲೆ ಕಲಬುರಗಿ ಲಾರಿ-ಟಿಪ್ಪರ್ ಡಿಕ್ಕಿ: ಚಾಲಕ ಸಾವು

ಲಾರಿ-ಟಿಪ್ಪರ್ ಡಿಕ್ಕಿ: ಚಾಲಕ ಸಾವು

ಕಲಬುರಗಿ,ಆ.27-ಲಾರಿ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಲಾರಿ ಚಾಲಕ ಮೃತಪಟ್ಟಿರುವ ಘಟನೆ ಶಹಾಬಾದ ಕ್ರಾಸ್ ಹತ್ತಿರ ನಡೆದಿದೆ.
ಚಿತ್ತಾಪುರ ತಾಲ್ಲೂಕಿನ ವಾಡಿಯ ಶಾಯಿನೂರ ತಂದೆ ಖಾಸಿಂ ಅಲಿ ಶೇಖ್ ಮೃತಪಟ್ಟವರು.
ಇವರು ಸಿಮೆಂಟ್ ಲೋಡ್ ತುಂಬಿದ್ದ ಲಾರಿಯನ್ನು ತೊನಸಳ್ಳಿ ಕಡೆಯಿಂದ ಶಹಾಬಾದ ಕ್ರಾಸಿನ ಕಡೆಗೆ ನಡೆಸಿಕೊಂಡು ಬರುತ್ತಿದ್ದಾಗ ಶಹಾಬಾದ ಕ್ರಾಸ್ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ-1 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.