ಲಾರಿ ಡಿಕ್ಕಿ: ಪಾದಚಾರಿ ಸಾವು

ಕಲಬುರಗಿ,ಜು.4-ಲಾರಿ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಚಾರಿ ಪೊಲೀಸ್ ಠಾಣೆ-2ರ ವ್ಯಾಪ್ತಿಯಲ್ಲಿ ಬರುವ ದರ್ಬಾರ್ ಹೋಟೆಲ್ ಬಳಿ ನಡೆದಿದೆ.
ಸಂಜೀವ ನಗರದ ಮೇಲಿನಕೇರಿ ನಿವಾಸಿ ಅಮಾತೆಪ್ಪಾ ಅಲಿಯಾಸ್ ಹಣಮಂತ ಮೃತಪಟ್ಟವರು.
ಇವರು ಪತ್ನಿ-ಮಕ್ಕಳೊಂದಿಗೆ ಕಳೆದು ಎಂಟು ಹತ್ತು ವರ್ಷಗಳಿಂದ ಮಹಾರಾಷ್ಟ್ರದ ಪುಣೆಯಲ್ಲಿದ್ದರು. ಒಂದು ವಾರದ ಹಿಂದೆಯಷ್ಟೇ ಕಲಬುರಗಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಅಣ್ಣಾ ಇಡ್ಲಿ ಹೋಟೆಲ್ ಕಡೆಯಿಂದ ನಡೆದುಕೊಂಡು ಬರುತ್ತಿದ್ದಾಗ ನೆಹರು ಗಂಜ್‍ನಿಂದ ಹುಮನಾಬಾದ ರಿಂಗ್ ರೋಡ್ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.