ಯಡ್ರಾಮಿ:ಸೆ.20:ಲೋಕಾಯುಕ್ತ ಅಧಿಕಾರಿಗಳು ಯಡ್ರಾಮಿ ತಾಲೂಕು ತಹಸೀಲ್ದಾರ ಕಚೇರಿಯ ಮೇಲೆ ದಾಳಿ ಮಾಡಿ ಕಚೇರಿಯ ಸಿಬ್ಬಂದಿಗಳಿಂದ 18 ಸಾವಿರ ಹಣ ಜಪ್ತಿ ಮಾಡಿದ ಘಟನೆ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ.
ಸಿದ್ದರಾಜು.ಸಿ.ಲೋಕಾಯುಕ್ತ ಎಸ್.ಪಿ.ಕಲಬುರಗಿ ಅವರು ಭ್ರಷ್ಟಾಚಾರ,ಕಚೇರಿಯ ಕೆಲಸಗಳು ವಿಳಂಬ ಮಾಹಿತಿಯ ಆಧಾರದ ಮೇಲೆ ಝೊಮ್ಯಾಟೊ ಕೇಸ್ ದಾಖಲಿಸಿಕೊಂಡು.
ಕಲಬುರಗಿ ಜಿಲ್ಲೆಯ 11 ತಾಲ್ಲೂಕಿನ ಎಲ್ಲಾ ತಾಲ್ಲೂಕಿಗೂ ತಂಡ ರಚನೆ ಮಾಡಿ ತಹಸೀಲ್ದಾರ ಕಚೇರಿಗಳ ಮೇಲೆ ಏಕ ಕಾಲದಲ್ಲಿ ಶುಕ್ರವಾರ ಬೆಳಗ್ಗೆ 11:45 ನಿಮಿಷಯ ದಾಳಿ ಮಾಡಲಾಗಿದೆ ಎಂದು ಹಣಮಂತ್ರಾಯ ಡಿ.ವಾಯ್.ಎಸ್.ಪಿ. ಲೋಕಾಯುಕ್ತರು ಬೀದರ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ತಹಸೀಲ್ದಾರ ಕಚೇರಯ ಸಂಪೂರ್ಣ ಕೆಲಸದ ವಿವರಗಳನ್ನು ಪಡೆದುಕೊಂಡರು ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ ತಕ್ಷಣ ಸ್ಥಳದಲ್ಲಿ ಕೆಲಸಾ ಮಾಡಿಸಿದ್ದರು.
ವಿಳಂಬ ಮಾಡಿದ ಕೆಲಸದ ಸಂಪೂರ್ಣ ಮಾಹಿತಿ ಪಡೆದೆಕೊಂಡರು ಅವರ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಹೇಳಿದರು.ಪ್ರತಿದಿನದ ಆವಕ ಜಾವಕ,ಮೇಲಾಧಿಕಾರಿಗಳು ಬಂದು ವೀಕ್ಷಣೆ ಮಾಡಿದ ರಜೀಸ್ಟರ ಮಾಡಿಲ್ಲ ಎಂದು ಕಂಡು ಬಂದವು. ದಾಳಿಯೂ ಸುಮಾರು ರಾತ್ರಿ 8 ಘಂಟೆಗಳವರೆಗೂ ಜರುಗಿತ್ತು.
ಈ ವೇಳೆಯಲ್ಲಿ ತಹಸೀಲ್ದಾರ ಯಲ್ಲಪ್ಪ ಸುಭೇದಾರ ನ್ಯಾಯಾಲಯದಲ್ಲಿ ಕೇಸ್ ಇರುವುದರಿಂದ ಗೈರು ಆದರೆ ಪ್ರಮುಖ ಖಾತೆಗಳನ್ನು ಹೊಂದಿದ ರಘರಾಜ ಅವರು ಕಚೇರಿಗೆ ಯಾವುದೇ ಮಾಹಿತಿ ನೀಡದೆ ಗೈರು ಆಗಿರುವುದು ಕಂಡು ಬಂದಿತ್ತು.
ದಾಳಿಯ ಲೋಕಾಯುಕ್ತ ಅಧಿಕಾರಿಗಳಾದ ಹಣಮಂತ್ರಾಯ ಡಿ.ವಾಯ್.ಎಸ್.ಪಿ. ಲೋಕಾಯುಕ್ತರು ಬೀದರ್,ವಿಷ್ಣು ರೆಡ್ಡಿ, ಕಾದರ್ ಮುಲ್ಲಾ, ಶಶಿಧರ್ ಶಂಕರ್, ನಾಗ್ ಶೆಟ್ಟಿ ಇದ್ದರು.
ಕಚೇರಿಯ ಲೆಕ್ಕಪತ್ರ,ಪಾಣಿ ತಿದ್ದುಪಡೆ,ಬಿಲ್ ಮಾಡುವ ಪ್ರಮುಖ ಖಾತೆಗಳನ್ನು ಹೊಂದಿದ ರಘರಾಜ ರೇಸ್ ವರ್ಕ ಭ್ರಷ್ಟಾಚಾರದಲ್ಲಿ ತೊಡಗಿದ್ದು ಅವರ ಆಸ್ತಿಯೂ ದುಪಟ್ಟು ಹೊಂದಿದ್ದು ಅವರ ಮೇಲೆ ಲೋಕಾಯುಕ್ತರು ದಾಳಿ ಯಾಕೆ ಮಾಡಬಾರದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.

























