
ಕಲಬುರಗಿ,ಮೇ.22-ಸಾರ್ವಜನಿಕರು ಕಚೇರಿಗೆ ಬಂದಾಗ ಅವರನ್ನು ಅಲೆದಾಡಿಸಬೇಡಿ, ಯಾವುದೇ ಕೆಲಸಗಳನ್ನು ವಿಳಂಬ ಮಾಡದೆ ಬೇಗ ಮಾಡಿಕೊಡಿ ಎಂದು ಲೋಕಾಯುಕ್ತ ಎಸ್‍ಪಿ ಬಿ.ಕೆ.ಉಮೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಹಶೀಲ್ದಾರ ಕಚೇರಿಯಲ್ಲಿಂದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ಯಾವುದೇ ಅರ್ಜಿಗಳನ್ನು ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿವೈಎಸ್‍ಪಿ ಗೀತಾ ಬೇನಾಳ್, ಇನ್ಸಪೆಕ್ಟರ್ ಅರುಣಕುಮಾರ, ತಹಶೀಲ್ದಾರರು ಮತ್ತು ಸಿಬ್ಬಂದಿಗಳಾದ ಬಸವರಾಜ, ಪ್ರದೀಪ್, ಸುನೀಲ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.