ಲೊಕೇಷನ್ ಆ್ಯಪ್ ಗೊಂದಲ: ಕುರಿ ಶೆಡ್, ಹೊಲದ ದಾರಿ ತೋರಿಸಿದ ಆ್ಯಪ್

ಸಿರುಗುಪ್ಪ ಸೆ26:  ಲೊಕೇಷನ್ ಆ್ಯಪ್ ತೋರಿಸಿದ ಪ್ರಕಾರ ಶಿಕ್ಷಕರು ಸಮೀಕ್ಷೆಯನ್ನು ಮನೆಗಳಿಗೆ ತೆರಳಿ ಮಾಡಬೇಕು, ಆದರೆ ನೆಟ್‌ವರ್ಕ್ ಬರುತ್ತಿಲ್ಲವೆಂದು ಬೀದರ್ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರು ಮರವನ್ನು ಹತ್ತಿದ್ದರು. ಸಿರುಗುಪ್ಪ ತಾಲೂಕಿನಲ್ಲಿ ಲೊಕೇಷನ್ ಆ್ಯಪ್ ತೋರಿಸಿದ ಪ್ರಕಾರ ಶಿಕ್ಷಕ ಮಂಜುನಾಥ ಮನೆಗಳನ್ನು ಸಮೀಕ್ಷೆ ಮಾಡಲು ತೆರಳಿದಾಗ ಹೊಲದಲ್ಲಿರುವ ಖಾಲಿ ಕುರಿ ಶೆಡ್ ತೋರಿಸಿದ್ದು, ಗೊಂದಲ ಉಂಟಾಗಿದೆ.

ತಾಲೂಕಿನ ತೆಕ್ಕಲಕೋಟೆ ಪಟ್ಟಣದ ವ್ಯಾಪ್ತಿಗೆ ಬರುವ ದೇವಿನಗರದ ಸಮೀಪವಿರುವ ರೇವಣ ಸಿದ್ದಪ್ಪನ ಬಡಾವಣೆಯಲ್ಲಿ 2 ಮನೆಗಳಿದ್ದು, ಇಲ್ಲಿಂದ ಮುಂದೆ ಹೊಲಕ್ಕೆ ಹೋಗುವ ಹಾದಿಯಲ್ಲಿ ಕುರಿ ಶೆಡ್ ಇದ್ದು, ಸರ್ಕಾರದ ಆರ್ಥಿಕ ಮತು ಸಾಮಾಜಿ, ಶೈಕ್ಷಣ ಕ ಸಮೀಕ್ಷೆ ಮಾಡುತ್ತಿರುವ ಸಮೀಕ್ಷೆದಾರ ಮಂಜುನಾಥ ಎನ್ನುವ ಶಿಕ್ಷಕರು ಸರ್ಕಾರ ನೀಡಿದ ಮನೆಗಳ ಸಮೀಕ್ಷೆ ಲೊಕೇಷನ್ ಆ್ಯಪ್ ಓಪನ್ ಮಾಡಿದಾಗ ಹೊಲದಲ್ಲಿರುವ ಯಾರು ವಾಸಮಾಡದ ಕುರಿ ಶೆಡ್ ಆ್ಯಪ್‌ನಲ್ಲಿ ತೋರಿಸಿದೆ. ಇದರಿಂದಾಗಿ ಗೊಂದಲಕ್ಕೆ ಒಳಗಾದ ಸಮೀಕ್ಷೆದಾರ ಶಿಕ್ಷಕ ಮಂಜುನಾಥ ಕಕ್ಕಾಬಿಕ್ಕಿಯಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.