ಬೀದರ್ ಸೆ. 19 ಃ ಸ್ಥಳೀಯ ಕಲಾವಿದರು ನಮ್ಮ ಸಂಸ್ಕøತಿ, ಪರಂಪರೆ ಮತ್ತು ಇತಿಹಾಸದ ಜೀವಂತ ಕೊಂಡಿ, ನಾವು ಅವರನ್ನು ಗುರುತಿಸುವುದೇ ಅವರ ವಿಶಿಷ್ಟ ವೇಷ ಭೂಷಣ, ಕಲೆ ಪ್ರದರ್ಶನ ಹಾಗೂ ಜನರ ಮನ ಸೆಳೆಯುವ ಸಾಮಥ್ರ್ಯದಿಂದ, ಪ್ರತಿಯೊಬ್ಬ ಕಲಾವಿದನು ತನ್ನದೇ ಆದ ಗುರುತನ್ನು ಹೊತ್ತಿರುತ್ತಾನೆ. ಅವರ ಕಲೆಯನ್ನು ಸಮಾಜಕ್ಕೆ ಚೈತನ್ಯ, ಮನರಂಜನೆ ಹಾಗೂ ಸಂಸ್ಕಾರವನ್ನು ನೀಡುತ್ತವೆ ಎಂದು ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪಾ ಶರ್ಮಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರ ಬೆಳಿಗ್ಗೆ ಬೀದರ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ್ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೀದರ್ ಹಾಗೂ ಪಶು ವೈದ್ಯಕೀಯ ಮಹಾ ವಿದ್ಯಾಲಯ ಬೀದರ್ ಇವರ ಸಯುಕ್ತಾಶ್ರಯದಲ್ಲಿ ಏರ್ಪಡಿಸಿದ 2025-26ನೇ ಸಾಲಿನ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ಮಾನ್ಯ ಆಡಳಿತ ಸದಸ್ಯರಾದ ಬಸರಾಜ ಪಿ.ಭತಮುರ್ಗೆ ಅವರು ಮಾತನಾಡಿ, ನಾವು ಕನ್ನಡವನ್ನು ಕೇವಲ ಮಾತಿನ ಮಟ್ಟದಲ್ಲಿ ಉಳಿಸದೇ, ದಿನನಿತ್ಯದ ಜೀವನದಲ್ಲಿ, ಅಧ್ಯಯನದಲ್ಲಿ, ಸಾಹಿತ್ಯದಲ್ಲಿ ಹಾಗೂ ಆಡಳಿತದ ಮಟ್ಟದಲ್ಲಿಯೂ ಬಳಸಬೇಕು. ಈ ನಿಟ್ಟಿನಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳಿಂದಲೇ ಕನ್ನಡ ಸಂಘವನ್ನು ಕಟ್ಟಲಾಗಿದೆ ಎಂಬುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಕನ್ನಡಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಪರಂಪರೆ ಇದೆ. ಪಂಪ, ರನ್ನ, ಕುವೆಂಪುರಂತಹ ಅನೇಕ ವಿದ್ವಾಂಸರು ಕನ್ನಡದ ಗೌರವವನ್ನು ವಿಶ್ವಮಟ್ಟಕ್ಕೆ ತಲುಪಿಸಿದ್ದಾರೆ. ನಾವು ಆ ಪರಂಪರೆಯನ್ನು ಮುಂದುವರಿಸುವುದು ನಮ್ಮ ಹೊಣೆಗಾರಿಕೆ. ವಿದ್ಯಾರ್ಥಿ ಜೀವನದಿಂದಲೇ ಕನ್ನಡದೊಂದಿಗೆ ಬೆಸೆದುಕೊಂಡರೆ ಅದು ಮುಂದಿನ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ. ಜಾಗತೀಕರಣದ ಈ ಯುಗದಲ್ಲೂ ಕನ್ನಡ ತನ್ನದೇ ಆದ ಪ್ರಭಾವವನ್ನು ಕಳೆದುಕೊಳ್ಳಬಾರದು ಎಂದು ಒತ್ತಿ ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಮ್ಮ ಇಲಾಖೆಯ ಮುಖ್ಯ ಉದ್ದೇಶವೇ ಸ್ಥಳೀಯ ಕಲಾವಿದರನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುವುದು. ಈ ಹಿನ್ನೆಲೆಯಲ್ಲಿ ಇಲಾಖೆಯು ವರ್ಷ ಪೂರ್ತಿ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಲಾವಿದರನ್ನು ಬೆಳಕಿಗೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಬೀದರ್ ವಿಶ್ವವಿದ್ಯಾಲಯದ ಮಾನ್ಯ ಕುಲ ಸಚಿವರಾದ ಕು.ಸುರೇಖಾ ಕೆ. ಸಿ. ವೀರಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲ್ಬುರ್ಗಿ ವಿಭಾಗದ ಜಂಟಿ ನಿರ್ದೇಶಕರಾದ ಬಸವರಾಜ್ ಹೂಗಾರ, ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ. ಪಿ.ಟಿ. ರಮೇಶ್, ಪಶು ವೈದ್ಯಕೀಯ ವಿದ್ಯಾಲಯದಡೀನ್ ಡಾ.ಎಂ.ಕೆ.ತಾಂಡ್ಲೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ, ಡಾ. ಚನ್ನಪ್ಪಗೌಡ ಬಿರಾದಾರ, ಮಾತನಾಡಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾ ತಂಡಗಳು : ಗೊಲ್ಲಹಳ್ಳಿ ಶಿವಪ್ರಸಾದ್ ತಂಡದಿಂದ ಜಾನಪದ ಗೀತೆ, ಶಾಸ್ತ್ರೀಯ ಸಂಗೀತ ಜಗನ್ನಾಥ್ ನಾನಕೇರಿ, ಸುಗಮ ಸಂಗೀತ ಮಲ್ಲಿಕಾರ್ಜುನ ಸ್ವಾಮಿ ತಂಡ, ಜಾನಪದ ಗೀತೆ ಶ್ರೀಮತಿ ಡಿಲೈಮಾತಂಡ, ಸಮೂಹ ನೃತ್ಯ ಶ್ರೀಮತಿ ಉμÁ ಪ್ರಭಾಕರ್ ತಂಡದಿಂದ ಡೊಳ್ಳು ಕುಣಿತ ಸಂಜೀವ ತಂಡದಿಂದ ತಮಟೆ ವಾದನ, ಸುನಿಲ್ ಮಣ್ಣೂರ್ ತಂಡದಿಂದ ಚರ್ಮವಾಧ್ಯ, ಬಾಲರಾಜ್ ತಂಡದಿಂದ ಕಥಾಕೀರ್ತನ, ರಾಮದಾಸ್ ಮಹಾರಾಜ್ ನಾಟಕ ತಾಯಿ ನೆರಳು ಚಿರಂಜೀವಿ, ಸೇರಿದಂತೆ ಅನೇಕ ತಂಡಗಳು ಭಾಗವಹಿಸಿ ತನ್ನ ಕಲೆಯನ್ನು ವೇದಿಕೆ ಮೇಲೆ ನೋಡುಗರ ಗಮನ ಸೇಳೆದರು.
ಪ್ರಶಾಂತ ಹೊನ್ನಾ ನಿರೂಪಿಸಿದರೆ ಕು. ಕ್ಲೈಮೆಂಟಿನಾ ವಂದಿಸಿದರು. ಅದೇ ಸಂದರ್ಭದಲ್ಲಿ ಸಿಬ್ಬಂದಿಗಳಾದ ಗುರುರಾಜ್, ಸುಧಾಕರ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿಧ್ಯಾರ್ಥಿಗಳು ಕಲಾವಿದರು ಉಪಸ್ಥಿತರಿದ್ದರು.

























