Home ಜಿಲ್ಲೆ ಔರಾದನಲ್ಲಿ ನಾಳೆ ಜಾನುವಾರು ಪ್ರದರ್ಶನ

ಔರಾದನಲ್ಲಿ ನಾಳೆ ಜಾನುವಾರು ಪ್ರದರ್ಶನ

ಔರಾದ್ : ಫೆ.22:ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ)ದಲ್ಲಿ ನಾಳೆ ದಿ: 23-02-2026ರಂದು ಸೋಮವಾರ ಜಾನುವಾರು ಪ್ರದರ್ಶನ ಏರ್ಪಾಡು ಮಾಡಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಾತ್ರಾ ಮಹೋತ್ಸವ ನಿಮಿತ್ತ ಜಾನುವಾರು ಪ್ರದರ್ಶನ ಆಯೋಜಿಸಲಾಗಿದೆ, ಜಾನುವಾರು ಪ್ರದರ್ಶನದಲ್ಲಿ ಉತ್ತಮ ತಳಿಯ ಜಾನುವಾರುಗಳನ್ನು ಆಯ್ಕೆ ಮಾಡಿ ಔರಾದ (ಬಾ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮೂರು ಚಾಂಪಿಯನ್ ಬಹುಮಾನಗಳ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7500, ತೃತೀಯ ಬಹುಮಾನ 5000 ಹಾಗೂ ತಳಿವಾರು ಎರಡು ಸಮಧಾನಕರ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಯುಕ್ತ ರೈತರು ತಮ್ಮ ಜಾನುವಾರುಗಳನ್ನು ದಿನಾಂಕ: 23-02-2026ರಂದು ಸೋಮವಾರ ಬೆಳಿಗ್ಗೆ 09-00 ಗಂಟೆಗೆ ಔರಾದ (ಬಾ) ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಎ.ಪಿ.ಎಂ.ಸಿ ಯು ನಿಗದಿಪಡಿಸಿದ ಸ್ಥಳದಲ್ಲಿ ಜಾನುವಾರು ಪಶು ಪ್ರದರ್ಶನದಲ್ಲಿ ತಳಿವಾರು ಸಾಲಾಗಿ ಶಿಸ್ತಿನಿಂದ ನಿಲ್ಲಿಸತಕ್ಕದ್ದು, ಎ.ಪಿ.ಎಂ.ಸಿ ನಿಗಧಿಪಡಿಸಿದ ಆಯ್ಕೆ ಸಮಿತಿಯು ಜಾನುವಾರುಗಳನ್ನು ಪರೀಕ್ಷೆ ಮಾಡಿ ಬಹುಮಾನದ ಸಲುವಾಗಿ ಆಯ್ಕೆ ಮಾಡಲಾಗುವುದು. ಬಹುಮಾನದ ಸಲುವಾಗಿ ಆಯ್ಕೆ ಮಾಡಿದ ಜಾನುವಾರುಗಳನ್ನು ಬಹುಮಾನ ವಿತರಣೆ ಮಾಡುವ ವರೆಗೆ ಮಾಲೀಕರು ಜಾನುವಾರುಗಳನ್ನು ಶಿಸ್ತಿನಿಂದ ಕಾಯ್ದಿರಿಸಬೇಕಾಗುವುದು ಎಂದು ತಿಳಿಸಿದ್ದಾರೆ.