ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೧೪: ಸಾಹಿತಿ ಪ್ರೊ. ದೊಡ್ಡಣ್ಣ ಭಜಂತ್ರಿ ಅವರಿಗೆ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಬಬಲೇಶ್ವರ ತಾಲೂಕಿನ ವಿಜಯಪುರ ಜಿಲ್ಲೆಯ ನಿಡೋಣಿ ಗ್ರಾಮದಲ್ಲಿ ಜರುಗಿದ ೯೧೮ನೇ ಚಂದಯ್ಯ ಶರಣರ ಜಯಂತಿಯ ಆಚರಣೆಯ ಕಾರ್ಯಕ್ರಮದಲ್ಲಿ ನಿಡೋಣಿಯ ಕಾಯಕಯೋಗಿ ಶರಣ ನುಲಿಯ ಚಂದಯ್ಯ ಭಜಂತ್ರಿ ಅಭಿವೃದ್ಧಿ ಸಂಘದವರು ಖ್ಯಾತ ಬಂಡಾಯ ಸಾಹಿತಿ ಪ್ರೊ.ದೊಡ್ಡಣ್ಣ ಬಜಂತ್ರಿ ಅವರಿಗೆ “ಸಾಹಿತ್ಯ ಭೂಷಣ”ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರೊ. ದೊಡ್ಡಣ್ಣ ಭಜಂತ್ರಿಯವರು ಕಾಲ ಕೆಟ್ಟತ ತಂಗಿ, ಲಚ್ಚ, ತುಂತುರು, ತಲ್ಲಣದ ಹಕ್ಕಿಹಾಡು, ಒಲೆಯ ಹೊಕ್ಕು, ಸೂಜಿ ಮಲ್ಲಿಗೆ ಹೀಗೆ ೬ ಕವನ ಸಂಕಲನ ಮತ್ತು ಎರಡು ನಾಟಕಗಳು ಹಾಗೂ ಕ್ಷಯಾಂಬರ ವಿನೋದ ಕಥಾ ಸಂಕಲನ ಅಲ್ಲದೆ ಜಾನಪದ ಸಂಭ್ರಮ ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.
























