ಲಿಂಗಪೂಜೆ ಶಿವನನ್ನು ಆರಾಧಿಸುವ ಆಚರಣೆ

ತಾಳಿಕೋಟೆ:ಅ.14: ಲಿಂಗಪೂಜೆ ಎನ್ನುವದು ಒಂದು ಪ್ರಮುಖ ಆಚರಣೆಯಾಗಿದ್ದು ಇದು ಭಕ್ತಿ ಆದ್ಯಾತ್ಮೀಕತೆ ಮತ್ತು ಮೋಕ್ಷದ ಮಾರ್ಗವನ್ನು ಸೂಚಿಸುತ್ತದೆ ಎಂದು ನಿವೃತ್ತ ಶಿಕ್ಷಕರಾದ ವೇ. ಎಸ್.ಎಂ.ಬೇನಾಳಮಠ ಅವರು ಹೇಳಿದರು.
ಬುಧವಾರರಂದು ಸ್ಥಳೀಯ ಬಣಜಗ ಸಮಾಜದ ಮಹಿಳಾ ಘಟಕದ ವತಿಯಿಂದ ಭಜಾರ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಏರ್ಪಡಿಸಲಾದ ಲಿಂಗಪೂಜಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಲಿಂಗ ಪೂಜೆಯ ಮಹತ್ವ ಕುರಿತು ತಿಳುವಳಿಕೆ ನೀಡಿದ ಅವರು ಈ ಪೂಜೆಯು ಭಗವಂತನ ನಿರಾಕಾರ ಸ್ವರೂಪವನ್ನು ಪ್ರತಿನಿಧಿಸುತ್ತದೆ ಲಿಂಗ ಎಡ ಅಂಗೈಯಲ್ಲಿ ಇರಿಸಲಾಗಿರುವಾಗ ದಿಟ್ಟಿಸಿ ನೋಡಿದಾಗ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಮನದಲ್ಲಿ ಪಠಿಸಿದರೆ ಇಷ್ಟ ಲಿಂಗದಲ್ಲಿ ಪ್ರತಿಫಲಿಸುವ ಬೆಳಕಿನ ಕಣವನ್ನು ನೋಡುವ ದೃಷ್ಠಿಯೋಗ ಇದು ಲಿಂಗಯೋಗದ ಸಾರವಾಗಿದೆ ಎಂದರು. ಮುಚ್ಚಿದ ಕಣ್ಣುಗಳೊಂದಿಗೆ ಮನದಲ್ಲಿ ಭಕ್ತಿಯಿಂದ ಲಿಂಗವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರಿಕರಿಸುವ ಕಾರ್ಯಕ್ಕೆ ಮುಂದಾಗಬೇಕು ಅಂದಾಗ ಲಿಂಗಪೂಜೆದ ಮಹತ್ವ ಎಂತಹದ್ದೆಂಬುದು ಅರಿವಾಗುತ್ತದೆ ಎಂದು ಹೇಳಿದ ಅವರು ಗುರುಲಿಂಗ ಜಂಗಮ, ಅಷ್ಟಾವರಣ, ಷಟಸ್ಥಲ, ಪಾದೋದಕ, ಪ್ರಸಾದ, ವಿಭೂತಿ ಧಾರಣೆ ಕುರಿತು ಅನೇಕ ಲಿಂಗಪೂಜಾ ಸಂಬಂದಿತ ವಿಚಾರಗಳನ್ನು ಉಪಸ್ಥಿತ ಮಹಿಳಾ ಘಟಕದವರಿಗೆ ಪ್ರಾತ್ಯಕ್ರೀಯ ಮೂಲಕ ವಿವರಿಸಿದರು.
ಇದೇ ಸಮಯದಲ್ಲಿ ಉಪಸ್ಥಿತರಾದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಸನ್ಮಾನ ಸ್ವಿಕರಿಸಿ ಮಾತನಾಡಿ ಬಣಜಗ ಸಮಾಜದ ಮಹಿಳಾ ಘಟಕವು ಈ ಹಿಂದಿನಿಂದಲೂ ತನ್ನದೇ ಆದ ಗೌರವದೊಂದಿಗೆ ಸಾಗಿಬಂದಿದೆ ಈ ಘಟಕದಲ್ಲಿರತಕ್ಕಂತಹ ಪದಾಧಿಕಾರಿಗಳ ಹಾಗೂ ಸದಸ್ಯನಿಯರ ವಿಚಾರಗಳು ಬಹಳೇ ಮಹತ್ವದವುಗಳಾಗಿದ್ದು ಇಂತಹ ವಿಚಾರಗಳು ಕೇವಲ ತಮ್ಮದೇ ಆದಂತಹ ಸಭೆಗಳಲ್ಲಿ ಹೊರ ಹಾಕುವಂತೆ ಅನ್ಯ ಕಾರ್ಯಕ್ರಮಗಳಲ್ಲಿಯೂ ಕೂಡಾ ತಮ್ಮೆಲ್ಲ ವಿಚಾರಗಳನ್ನು ಹೊರ ಹಾಕಿದರೆ ಅನ್ಯ ಮಹಿಳೆಯರಿಗೂ ಕೂಡಾ ಅನುಕೂಲವಾಗಲಿದೆ ಎಂದರು. ಬಣಜಗ ಸಮಾಜದ ಹಿರಿಯರಾದಂತಹ ಶಿವಲಿಂಗಪ್ಪ ಮುತ್ಯಾ ಅವರು ಸ್ವಾತಂತ್ರ್ಯಯೋದರಾಗಿ ಹೋಗಿದ್ದಾರೆ ಸುಮಾರು 200 ವರ್ಷಗಳ ಇತಿಹಾಸ ಉಳ್ಳ ಇವರು ಮಾಡಿದಂತಹ ಬ್ರಿಟಿಷರ ಕಾಲದ ಅವಧಿಯಲ್ಲಿ ಸ್ವಾತಂತ್ರ್ಯಕ್ಕಾಗಿಯೂ ಹೋರಾಟ ಗೈದಿರುವದು ಇಡೀ ದೇಶಕ್ಕೂ ಗೊತ್ತಿದೆ ಅಂತಹ ಮನೆತನದವರಾದ ಸಾಲಂಕಿ ಮನೆತನದವರಾಗಲಿ, ಸರಶೆಟ್ಟಿ ಮನೆತನದವರಾಗಲಿ, ಬಳಗಾನೂರ ಮನೆತನದವರು, ಕತ್ತಿ ಮನೆತನದವರಾಗಲಿ ಈ ಎಲ್ಲರೂ ಶ್ರೀಮಂತ ವರ್ಗದವರಾಗಿದ್ದರಿಂದ ಈ ಸಮಾಜದ ಇತಿಹಾಸ ಇನ್ನೂ ಪ್ರಜ್ವಲಿಸುತ್ತಾ ಸಾಗಿದೆ ಎಂದ ಘೋರ್ಪಡೆ ಅವರು ಈ ಸಂಘಟನೆ ಇನ್ನೂ ಹೆಚ್ಚಿಗೆ ಉತ್ತರೋತ್ತರವಾಗಿ ಬೆಳೆದು ಇಂದು ಜರುಗಿದ ಲಿಂಗಪೂಜೆಗಳಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಸಾಗಿ ಎಲ್ಲರಿಗೂ ಸನ್ಮಾರ್ಗಕ್ಕೆ ಒಯುವ ಕಾರ್ಯವಾಗಬೇಕು ಹಾಗೂ ಇನ್ನಿತರ ಮಹತ್ವದ ಕಾರ್ಯಕ್ರಮಗಳನ್ನು ಏರ್ಪಡಿಸಿ ಸರ್ಕಾರದ ಸೌಲಭ್ಯಗಳನ್ನು ಕೂಡಾ ಪಡೆಯುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
ಇನ್ನೋರ್ವ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶಿಲ್ಪಾ ಕಿಣಗಿ ಅವರು ಮಾತನಾಡಿ ಇಂದು ಸಮಾಜದ ಎಲ್ಲ ಮಹಿಳೆಯರು ಲಿಂಗಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದಿರುವದು ಆನಂದವನ್ನುಂಟು ಮಾಡಿದೆ ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಮ್ಮ ಸಂಘಟನೆಯಿಂದ ಜರುಗುತ್ತಾ ಸಾಗಲಿವೆ ಎಲ್ಲರೂ ಈ ಹಿಂದಿನಂತೆ ಮುಂದೆಯೂ ಕೂಡಾ ತಮ್ಮ ಸಹಕಾರ ನೀಡುವದರೊಂದಿಗೆ ಕಾರ್ಯಕ್ರಮಗಳ ಯಶಸ್ವಿಗೆ ಶ್ರಮಿಸುವ ಕಾರ್ಯ ಮಾಡೋಣವೆಂದರು.
ಈ ಕಾರ್ಯಕ್ರಮದಲ್ಲಿ ಡಾ.ದೀಪಾ ಮಾಳಗೆ, ಎನ್.ಸಿ.ತಾಳಿಕೋಟಿ, ಸುರೇಖಾ ಸಾಲಂಕಿ, ಯು.ಬಿ.ಸಾಲಂಕಿ, ಶೈಲಾ ಅರಕೇರಿ, ಸಾವಿತ್ರಿ ಅರಕೇರಿ, ಸುಧಾ ಮಡ್ಡಿ, ಸುವರ್ಣಾ ಅಸ್ಕಿ, ಚಂದ್ರಕಲಾ ದೇವಶೆಟ್ಟಿ, ಲಲಿತಾ ಮಡ್ಡಿ, ಶೃತಿ ಪಾಲ್ಕಿ, ವನಿತಾ ಸರಶೆಟ್ಟಿ, ರೇವತಿ ಸರಶೆಟ್ಟಿ, ದೀಪಾ ಕತ್ತಿ, ಪ್ರತಿಭಾ ಕತ್ತಿ, ಗೀತಾಂಜಲಿ ಬಳಗಾನೂರ, ಪ್ರಭಾವತಿ ಕತ್ತಿ, ಎಲ್.ಎ.ಇವಣಗಿ, ಉಮಾ ಘೀವಾರಿ, ಶೋಭಾ ಜಮ್ಮಲದಿನ್ನಿ, ಗಿರಿಜಾ ಜಮ್ಮಲದಿನ್ನಿ, ವೀಣಾ ಸರಶೆಟ್ಟಿ, ಸುಜಾತಾ ಕತ್ತಿ, ಸ್ನೇಹಾ ಸಾಲಂಕಿ, ರತ್ನಕಲಾ ಸರಶೆಟ್ಟಿ, ಮನಸ್ವಿ ಸಾಲಂಕಿ, ಸುಮಂಗಲಾ ಕಲ್ಬುರ್ಗಿ, ಸುಜಾತಾ ಸರಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದು ಲಿಂಗಪೂಜಾ ಕಾರ್ಯಕ್ರಮ ನೆರವೇರಿಸಿದರು.
ಶ್ರೀಮತಿ ಉಮಾ ಸಾಲಂಕಿ, ಸ್ವಾಗತಿಸಿ ನಿರೂಪಿಸಿದರು.