
ಬಸವಕಲ್ಯಾಣ :ಜ.7:ವಚನ ಸಾಹಿತ್ಯದಲ್ಲಿ ಸಾವಿರಾರುಕಡೆ ಲಿಂಗದೀಕೆÀ್ಷದ ಮಹತ್ವಕುರಿತುಎಲ್ಲಾ ಶರಣರುತಿಳಿ ಹೇಳಿದ್ದಾರೆ ಹೀಗಾಗಿ ಬಸವ ತತ್ವದಲ್ಲಿ ಲಿಂಗದೀಕ್ಷೆಕ್ಕೆಪ್ರಥಮಆಧ್ಯೆತೆಯಿದ್ದುಅದನ್ನುಎಲ್ಲರೂ ಧರಿಸಿ ಪೂಜಿಸಬಹುದಾಗಿದೆಎಂದುಅನುಭವ ಮಂಟಪದಅಧ್ಯಕ್ಷರಾದಡಾ.ಬಸವಲಿಂಗ ಪಟ್ಟದೇವರು ನುಡಿದರು.
ನಗರದಅಕ್ಕಮಹಾದೇವಿ ಗವಿ ಹತ್ತಿರದಕಲ್ಯಾಣ ಮಂಟಪದಲ್ಲಿಲಿಂಗದೀಕ್ಷೆ ಅಂಗವಾಗಿ ಗಡ್ಡೆ ಪರಿವಾರದಿಂದಹಮ್ಮಿಕೊಂಡಿರುವಬೃಹತ್ತ ಬಸವ ತತ್ವ ಸಮಾವೇಶ ಹಾಗೂ ಶರಣ ಭಾರತ ಸಂಶೋಧನಾಕೇಂದ್ರಉದ್ಘಾಟನೆಯ ಸಾನಿಧ್ಯೆ ವಹಿಸಿ ಮಾತನಾಡಿದಅವರು ಲಿಂಗಪೂಜೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಬರುತ್ತದೆಅಲ್ಲದೇಏಕಾಗೃತೆ ಮತ್ತುಜ್ಞಾಪಕ ಶಕ್ತಿ ವೃದ್ಧಿಸಿ ಆಯುಷ್ಯಅರೋಗ್ಯ ಹೆಚ್ಚುತ್ತದೆಎಂದು ಪಟ್ಟದೇವರು ತಿಳಿಸಿದರು.
ಹಿರಿಯ ಶರಣ ಸಾಹಿತಿಅಶೋಕ ಬರಗುಂಡೆಧಾರವಾಡನವರು ಮಾತನಾಡಿ ವಚನಗಳ ಅಧ್ಯಾಯನಮತ್ತು ಲಿಂಗಾಂಗ ಯೋಗ ಪ್ರತಿಯೊಬ್ಬರು ಮಾಡಬೇಕುವಿಧ್ಯಾರ್ಥಿಗಳಿಗೆ ಯುವಕರಿಗೆ ಈ ಕುರಿತು ತಿಳಿಹೇಳ ಬೇಕುವಚನ ಸಾಹಿತ್ಯದಆಶಯದಂತೆಗಡ್ಡೆ ಪರಿವಾರದಗೃಹಸ್ಥರಿಂದಲೇ ಲಿಂಗದೀಕ್ಷೆ ಮಾಡಿರುವುದುಕ್ರಾಂತಿಕಾರಿ ಹೆಜ್ಜೆಯಾಗಿದೆಎಂದರು.
ಅಧ್ಯಕ್ಷತೆ ವಹಿಸಿದ ಡಾ.ಗೋ.ರು.ಚೆನ್ನಬಸಪ್ಪನವರು ಮಾತನಾಡಿ ವಚನಗಳ ಉಗಮ ಸ್ಥಾನ ಬಸವಕಲ್ಯಾಣದಲ್ಲಿ ವಚನ ಸಾಹಿತ್ಯ ಮತ್ತು ಶಿವಯೋಗ ಕುರಿತು ಸಂಶೋಧನೆ ಸಾಹಿತ್ಯರಚನೆಕೆಲಸ ಮಾಡುವಉದ್ದೇಶದೊಂದಿಗೆ ವಚನ ಪಿತಾಮಹ ಫ.ಗು ಹಳಕಟ್ಟಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರಾದಪ್ರೊ.ವಿಜಯಲಕ್ಷ್ಮೀ ಮತ್ತುಗುರುನಾಥಗಡ್ಡೆಯವರ ಮಾರ್ಗದರ್ಶನದಲ್ಲಿಶರಣ ಭಾರತ ಸಂಶೋಧನಕೇಂದ್ರಕಾರ್ಯಮಾಡಲು ಮುಂದೆ ಬಂದಿದ್ದು ಸ್ವಾಗತಾರ್ಹವಾಗಿದೆಎಂದರು.
ಬಸವೇಶ್ವರ ದಿನದರ್ಶಿಕೆ ಬಿಡುಗಡೆ ಮಾಡಿದಡಾ.ರಂಜಾನದರ್ಗಾಮಾತನಾಡಿವಿಶ್ವಶಾಂತಿಗಾಗಿಬಸವ ತತ್ವದಕೊಡುಗೆಅಪಾರವಾಗಿದೆಇದನ್ನುಜಗತ್ತಿಗೆ ಮುಟ್ಟಿಸಲು ಸರ್ಕಾರ ಸಂಘ ಸಂಸ್ಥೆಗಳು ಸಾಹಿತಿ ಹಾಗೂ ಬಸವ ತತ್ವದ ಅಭಿಮಾನಿಗಳು ಮುಂದೆ ಬರಬೇಕುಎಂದರು.
ಡಾ.ವೀರಣ್ಣರಾಜೂರು ಬಸವ ದರ್ಶನಪಾಕೇಟಡೈರಿ ಬಿಡುಗಡೆಗೊಳಿಸಿದರು ಸಭೆಯಲ್ಲಿ ಭಾಗವಹಿಸಿದ ನೂರಾರುಜನರಿಗೆಬಸವೇಶ್ವರ ದಿನದರ್ಶಿಕೆ ಮತ್ತು ಪಾಕೇಟಡೈರಿಉಚಿತವಾಗಿವಿತರಿಸಲಾಯಿತು.
ಕಾರ್ಯಕ್ರಮದಲ್ಲಿಹರಳಯ್ಯ ಗವಿಯಡಾ.ಅಕ್ಕ ಗಂಗಾಂಬಿಕಾ,ಬಸವೇಶ್ವರದೇವಸ್ಥಾನ ಪಂಚಕಮೀಟಿಯ ಪ್ರಮುಖರಾದ ಶಶಿಕಾಂತ ದುರ್ಗೆ, ಬಸವರಾಜಕೋರಕೆ, ಡಾ.ಜಿ.ಎಸ್ ಭುರಾಳೆ, ಅನೀಲ ರಗಟೆ, ವೀರಣ್ಣ ಹಲಶೇಟ್ಟೆ, ಸಾವಿತ್ರಿ ಸಲಗರ, ವೈಜಿನಾಥಕಾಮಶೇಟ್ಟಿ, ಶಿವರಾಜ ನರಶೇಟ್ಟಿ, ತಹಸೀನ ಅಲಿ ಜಮಾದಾರ, ಕಾಡಾಅಧ್ಯಕ್ಷಬಾಬು ಹೊನ್ನನಾಯಕ, ವೀಠ್ಠಲರಾವ ಹುಗಾರ, ಅಶೋಕ ಬರಗುಂಡೆ, ಜಿ.ಎಸ್. ಪಾಟೀಲ, ಸಿದ್ದು ಯಾಪಲಪರವಿ, ಲಿಂಗಾರತಿಅಲ್ಲಮಪ್ರಭು ನಾವದಗೇರೆ, ಬಂಡೇಪ್ಪ ಪಾಟೀಲ ತರನಳ್ಳಿ, ಅಕ್ಕಮಹಾದೇವಿ ಗವಿಯ ಶರಣೆಯರಾದಸತ್ಯಕ್ಕತಾಯಿ, ಕಲ್ಯಾಣಮ್ಮಮುಂತಾದವರುಉಪಸ್ಥಿತರಿದ್ದರು.
ಸಂಚಾಲನೆ ಪತ್ರಕರ್ತಕಲ್ಯಾಣರಾವ ಮದರಗಾಂವಕರ, ಸ್ವಾಗತ ಪ್ರೊ.ವಿಜಯಲಕ್ಷ್ಮೀಗಡ್ಡೆ, ವಂದನಾರ್ಪಣೆಸಿದ್ದಲಿಂಗ ಮಾಡಿದರು.
ವಿಶೇಷ :ಇದೇ ಸಂಧರ್ಭದಲ್ಲಿಗೃಹಸ್ಥರಿಂದಲೇ ಲಿಂಗದೀಕ್ಷೆ ಪಡೆದಿರುವಡಾ.ಬಾಬಾಸಾಹೇಬ ಗಡ್ಡೆ ಮತ್ತುಡಾ.ಅಕ್ಕಮಹಾದೇವಿ ಮಕ್ಕಳಾದ ವಚನ ಮತ್ತು ವಿವೇಕ ಮಾತನಾಡಿದರು.
























