ಮೈಯಲ್ಲಿ ಬಟ್ಟೆ ಇದ್ದಂತೆ, ಕೈಯಲ್ಲಿ ಪುಸ್ತಕ ಇರಲಿ: ಸಿದ್ರಾಮ ಶಿಂಧೆ

ಬೀದರ್: ಸೆ.4:ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಮೈಯಲ್ಲಿ ಬಟ್ಟೆ ಧರಿಸುವುದು ಎಷ್ಟು ಅನಿವಾರ್ಯವೊ ಕೈಯಲ್ಲಿ ಪುಸ್ತಕ ಅಷ್ಟೆ ಮಹತ್ವದ್ದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ತಿಳಿಸಿದರು.
ಮಂಗಳವಾರ ಸಾಯಂಕಾಲ ನಗರದ ರೋಟ್ರಿ ವೃತ್ತದಲ್ಲಿರುವ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ್ ಮತ್ತು ಕರ್ನಾಟಕ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಾಹಿತಿ ಪೆÇ್ರ.ಶಿವಕುಮಾರ ನಾಗವಾರ ಅವರ ಕಥಾ ಸಂಕಲನ ಹಣಾದಿ ಕುರಿತು ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಓದುವ ಹವ್ಯಾಸ ಬೆಳೆಯುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಪುಸ್ತಕ ಸಂಸ್ಕೃತಿಯು ಕನ್ನಡ ನಾಡು, ನುಡಿ, ಭಾಷೆ ಬೆಳವಣಿಗೆ ಜೊತೆಗೆ ಸಾಹಿತಿಗಳ ಬರಹ ಬಲಿಷ್ಟವಾಗುತ್ತದೆ. ಉದಯೋನ್ಮುಖ ಬರಹಗಾರರಿಗೆ ಪುಸ್ತಕಗಳು ಮಾರ್ಗದರ್ಶಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿರುವ ಕನ್ನಡ ಮತ್ಯು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಶಾಂತಕುಮಾರ ಪಾಟೀಲ, ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕಗಳು ಪೂರಕವಾಗಿದ್ದು, ಮನುಷ್ಯನ ಜ್ಞಾನಶಕ್ತಿ ವೃದ್ಧಿಗೆ ಇವು ಸಹಕಾರಿಯಾಗಲಿವೆ. ಮೊಬೈಲ್ ಸಂಸ್ಕೃತಿ ನಮ್ಮ ಬೆಳವಣಿಗೆ, ಜಾನಪದ ಸಂಸ್ಕೃತಿ ನಿರ್ಮಾಣ, ಏಕಾಗೃತೆ, ನೆಮ್ಮದಿ, ಪರಸ್ಪರ ಸಂಬಂಧಗಳು ಹತ್ತಿರವಾಗಲು ಸಾಧ್ಯವಾಗಲಿದೆ. ಇದೆಲ್ಲಕ್ಕೂ ಮಿಗಿಲಾಗಿ ವ್ಯಕ್ತಿಯ ಗೌರವ ಹಾಗೂ ಘನತೆ ಹೆಚ್ಚಳಕ್ಕೆ ಪುಸ್ತಕಗಳು ತುಂಬ ಉಪಯುಕ್ತವಾಗಲಿವೆ ಎಂದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಪೆÇ್ರ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, 33 ಸ್ಥಳಿಯ ಸಾಹಿತಿಗಳ ಪುಸ್ತಕಗಳನ್ನು ಬೀದರ್ ವಿಶ್ವವಿದ್ಯಾಲಯ ತನ್ನ ಪಠ್ಯಕ್ರಮಕ್ಕಾಗಿ ಬಳಿಸಿಕೊಂಡಿದೆ. ಇದರಿಂದ ಗ್ರಾಮೀಣ ಭಾಗದ ಜನಪದ ಬಳಿಕೆಯಾಗಿದೆ. ಗ್ರಾಮಾಂತರ ಕಲೆ, ಸಾಹಿತ್ಯ, ಸಂಸ್ಕೃತಿಯ ಏಳಿಗೆಗೆ ಇದು ಸಹಾಯಕವಾಗಿದೆ ಎಂದರು.
ಕಥಾ ಸಂಕಲನ ಹೊರ ತಂದಿರುವ ಸಾಹಿತಿ ಪೆÇ್ರ.ಶಿವಕುಮಾರ ನಾಗವಾರ ಮಾತನಾಡಿ, ಬೀದರ್ ಜಿಲ್ಲೆ ಶಾಹಿ ಸಂಸ್ಕೃತಿಯ ನೆಲೆಯಾಗಿದ್ದು, ಹಿಂದಿ, ಮರಾಠಿ, ತೆಲಗು, ಉರ್ದು ಭಾಷೆ ಸಮ್ಮಿಶ್ರಣದಲ್ಲಿ ಸಾಹಿತ್ಯ ರಚನೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಪದಗಳನ್ನು ಬಳಿಕೆ ಮಾಡುವ ಮುಖೇನ ಈ ಕಥಾ ಸಂಕಲನ ಗಟ್ಟಿಗೊಳಿಸಲಾಗಿದೆ ಎಂದರು.
ಸಾಹಿತಿ ಗವಿಸಿದ್ದಪ್ಪ ಪಾಟೀಲ ಪುಸ್ತಕ ಪರಿಚಯ ಮಾಡಿ ಮಾತನಾಡಿ, ಇದರಲ್ಲಿ 7 ವಿವಿಧ ಕಥೆಗಳನ್ನು ಸಂಗ್ರಹಿಸಲಾಗಿದೆ. ನವ್ಯ ಸಾಹಿತ್ಯ, ಹಳೆಗನ್ನಡ ಪದಗಳ ಜೋಡಣೆ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ ಎಲ್ಲವನ್ನು ಹಿಡಿದಿಡಲಾಗಿದೆ. ಸ್ಥಳಿಯ ನೆಲೆಗಟ್ಟಾದ ಹಣಾದಿ ನಮ್ಮ ಗ್ರಾಮೀಣ ಜನರ ಭೌಗೊಳಿಕ ಬದುಕು ವಿಶ್ಲೇಶಿಸಲಾಗಿದೆ ಎಂದು ಹೇಳಿ ಇಡೀ ಪುಸ್ತಕದ ಸಾರಂಶವನ್ನು ಬಿಚ್ಚಿಟ್ಟರು.
ತಿಂಗಳ ಪುಸ್ತಕ ಪರಿಚಯ ಸಮಿತಿ ಅಧ್ಯಕ್ಷೆ ಡಾ.ಸುನಿತಾ ಕೂಡ್ಲಿಕರ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವೈಜಿನಾಥ ಪಾಟೀಲ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಪ್ರವಿಣ ಜೀರ್ಗೆ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಅಂಬಿಕಾ ಬಿರಾದಾರ ವಂದಿಸಿದರು.
ಎಂ.ಜಿ ದೇಶಪಾಂಡೆ, ಡಾ.ರಾಜಕುಮಾರ ಹೆಬ್ಬಾಳೆ, ಶಂಭೂಲಿಂಗ ವಾಲ್ದೊಡ್ಡಿ, ವೀರಭದ್ರಪ್ಪ ಉಪ್ಪಿನ, ಪುಂಡಲಿಕರಾವ ಇಟಕಂಪಳ್ಳಿ, ಡಾ.ರಾಮಚಂದ್ರ ಗಣಾಪುರ, ಗುರುನಾಥ ಅಕ್ಕಣ್ಣ, ರುಕ್ಮೊದ್ದಿನ್ ಇಸ್ಲಾಂಪುರ, ಡಾ.ಅಶೋಕ ಕೋರೆ ಸೇರಿದಂತೆ ಸಾಹಿತ್ಯಾಸಕ್ತರು, ಬರಹಗಾರರು, ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.