Home ಜಿಲ್ಲೆ ಕಲಬುರಗಿ ಪಿಡಿಒಗೆ ಜೀವ ಬೆದರಿಕೆ : ಆರೋಪಿ ಬಂಧನಕ್ಕೆ ರಾಜೇಶ್ವರಿ ಸಾಹು ಆಗ್ರಹ

ಪಿಡಿಒಗೆ ಜೀವ ಬೆದರಿಕೆ : ಆರೋಪಿ ಬಂಧನಕ್ಕೆ ರಾಜೇಶ್ವರಿ ಸಾಹು ಆಗ್ರಹ

ಕಲಬುರಗಿ :ಮಾ.11: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಮ್ರಾಜ್ ಮಮದಾಪುರ ಅವರಿಗೆ ಜೀವ ಬೆದರಿಕೆ ಹಾಕಿದ ಕೂಡಲೇ ಬಂಧಿಸಬೇಕು. ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘ ಬೆಂಗಳೂರು ರಾಜ್ಯ ನಿರ್ದೇಶಕರಾದ ಕುಮಾರಿ ರಾಜೇಶ್ವರಿ ಸಾಹು ಅವರು ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಿಂಗಣ್ಣ ಎನ್ನುವವರು ಮಹಿಳಾ ಅಧಿಕಾರಿ ಇವಮ್ರಾಜ್ ಅವರಿಗೆ ಅಸಭ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಘಟನೆ ಇಲಾಖೆಯ ಅಧಿ ಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಿದ್ದು, ಆರೋಪಿ ವಿರುದ್ಧ ರೌಡಿ ಶೀಟ್ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಮೇಲಿನ ಹಲ್ಲೆ ಹಾಗೂ ಅಸಹಜ ಸಾವುಗಳ ಮೀನಾಕ್ಷಿ ಸುಂದರಂ ಅಧ್ಯಯನ ಸಮಿತಿಯ ವರದಿಕೂಡಲೇ ಪಡೆದು, ನೌಕರರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಬಡ್ತಿ, ವೇತನ ತಾರತಮ್ಯ ಹಾಗೂ ಹುದ್ದೆ ಉನ್ನತೀಕರಣ ಸಮಸ್ಯೆ ಪರಿಹರಿಸಬೇಕು. ಎಲ್ಲ ಪಿಡಿಒ ಹುದ್ದೆಗಳನ್ನು ಗ್ರೂಪ್ ಬಿ ದರ್ಜೆಗೆ ಏರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.